ಬಂಟ್ವಾಳ: ಕಡೇಶ್ವಾಲ್ಯ ಗ್ರಾಮದ ಬುಡೋಳಿಯಲ್ಲಿ ಬಂಟ್ವಾಳ ಅರಣ್ಯ ಇಲಾಖೆಯ  ಗಸ್ತಿನ ತಂಡ ನ. ೨೪ರ ರಾತ್ರಿ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಮರದ ದಿಮ್ಮಿಗಳು ಹಾಗೂ ಲಾರಿಯನ್ನು ವಶಪಡಿಸಿಕೊಂಡ ಘಟನೆ ನಡೆದಿದೆ.36188d50-0273-4961-94fd-9679b241c6bb

ವಶಪಡಿಸಿಕೊಂಡ ಸೊತ್ತುಗಳು ಹಾಗೂ ವಾಹನದ ಮೌಲ್ಯ ೫ ಲಕ್ಷ ರೂ. ಅಂದಾಜಿಸಲಾಗಿದೆ. ಕಾರ್ಯಾಚರಣೆಯಲ್ಲಿ ಬಂಟ್ವಾಳ ವಲಯ ಅರಣ್ಯಾಧಿಕಾರಿ ರಾಜೇಶ್ ಬಳಿಗಾರ್, ಉಪವಲಯ ಅರಣ್ಯಾಧಿಕಾರಿ ಪ್ರೀತಂ ಎಸ್, ಯಶೋಧರ, ಅರಣ್ಯ ರಕ್ಷಕರಾದ ಲಕ್ಷ್ಮೀನಾರಾಯಣ, ಜಿತೇಶ್ ವಿ, ಸಿಬ್ಬಂದಿ ಪ್ರವೀಣ್ ಕಲ್ಮಲೆ, ಭಾಸ್ಕರ ಡಿ, ಜಯರಾಮ್ ಪಾಲ್ಗೊಂಡಿದ್ದರು.
ಡಿಸಿಎಫ್ ಡಾ| ಕರಿಕಾಲನ್ ಅವರ ಮಾರ್ಗದರ್ಶನದಲ್ಲಿ ಎಸಿಎಫ್ ಸುಬ್ರಹ್ಮಣ್ಯ ರಾವ್ ಅವರು ಪ್ರಕರಣದ ಮುಂದಿನ ತನಿಖೆ ನಡೆಸಲಿದ್ದಾರೆ. ಕಾರ್ಯಾಚರಣೆಯ ವೇಳೆ ಪುತ್ತೂರು ವಲಯ ಅರಣ್ಯಾಽಕಾರಿ ಕಚೇರಿ ಸಿಬಂದಿ ಸಹಕರಿಸಿದ್ದರು.

By suddi9

Leave a Reply

Your email address will not be published. Required fields are marked *