ಬಂಟ್ವಾಳ: ಪುನರ್ ನಿರ್ಮಾಣಗೊಳ್ಳುತ್ತಿರುವ ನರಹರಿ ಪರ್ವತ ಸದಾಶಿವ ದೇವಸ್ಥಾನದಲ್ಲಿ ಶಿವಾಜಿ ಫ್ರೆಂಡ್ಸ್ ಶಿವಾಜಿನಗರ ಬರಿಮಾರ್ ತಂಡದಿಂದ ಶ್ರಮದಾನವು ನಡೆಯಿತು. ಜೀರ್ಣೊದ್ಧಾರ ಸಮಿತಿ ಅಧ್ಯಕ್ಷರಾದ ಆತ್ಮರಂಜನ್ ರೈ, ಸಂಘಟನಾ ಕಾರ್ಯದರ್ಶಿ ಶಂಕರ ಆಚಾರ್ಯ, ಮಾಜಿ ಪುರಸಭಾ ಸದಸ್ಯ ದಾಮೋದರ್ ಮೆಲ್ಕಾರ್, ಯುವಸಂಗಮದ ಅಧ್ಯಕ್ಷರಾದ ಓಂ ಪ್ರಕಾಶ್, ಮೋಕ್ತೆಸರರಾದ ಕೃಷ್ಣ ನಾಯಕ್, ಯಂ. ಯನ್ ಕುಮಾರ್, ಮೆನೇಜರ್ ಆನಂದ್, ಸಜೀಪ ಸುರೇಶ್, ದಯಾನಂದ ಬೋಳಂಗಡಿ ಮುಂತಾದವರು ಉಪಸ್ಥಿತರಿದ್ದರು.
