ಬಂಟ್ವಾಳ : ಪುದು ಗ್ರಾಮ ಪಂಚಾಯತ್ ನ ಪಂಚಾಯತ್ ಸದಸ್ಯರ ಅನುದಾನದಿಂದ ಕಾಂಕ್ರೀಟಿಕರಣಗೊಂಡ ಗೋವಿಂದೋಟ ಸಂಪರ್ಕ ರಸ್ತೆಯನ್ನು ಜಿಲ್ಲಾ ಪಂಚಾಯತ್ ಸದಸ್ಯರಾದ ರವೀಂದ್ರ ಕಂಬಳಿ ಅವರು ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು ಗ್ರಾಮಸ್ಥರ ಬಹುಕಾಲದ ಬೇಡಿಕೆಯಲ್ಲೊಂದಾದ ಈ ರಸ್ತೆಗೆ ಅನುದಾನವನ್ನು ಒದಗಿಸಿ ಅಭಿವೃದ್ದಿಪಡಿಸಿದ ಗ್ರಾಮ ಪಂಚಾಯತ್ ಸದಸ್ಯರಿಗೆ ಅಭಿನಂದನೆಯನ್ನು ಸಲ್ಲಿಸಿದರು.
ಎಪಿಎಂಸಿ ಉಪಾಧ್ಯಕ್ಷ ವಿಠ್ಠಲ್ ಸಾಲ್ಯಾನ್, ಫರಂಗಿಪೇಟೆ ವ್ಯವಸಾಯ ಸೇವಾ ಸಂಘದ ಅಧ್ಯಕ್ಷ ಸುಬ್ರಮಣ್ಯ ಭಟ್, ಗ್ರಾಮ ಪಂಚಾಯತ್ ಸದಸ್ಯರಾದ ಸಂತೋಷ್ ಕುಮಾರ್, ಬೂತ್ ಸಮಿತಿ ಅಧ್ಯಕ್ಷರಾದ ನಾಗಪ್ಪ ಕಬೇಲ, ಹಿಂದು ಜಾಗರಣ ವೇದಿಕೆ ಜಿಲ್ಲಾಧ್ಯಕ್ಷರಾದ ಜಗದೀಶ್ ನೆತ್ತರಕೆರೆ, ಹಿರಿಯರಾದ ಆನಂದ ಶೆಟ್ಟಿ ಗೋವಿಂದೋಟ ಮುಂತಾದವರು ಉಪಸ್ಥಿತರಿದ್ದರು.ಗೋಪಾಲ್ ಕುಲಾಲ್ ಗೋವಿಂದೋಟ ಸ್ವಾಗತಿಸಿ, ವಂದಿಸಿದರು.

