ಉಡುಪಿ: ನಗರದ ಸಾರ್ವಜನಿಕ ಸ್ಥಳಗಳಲ್ಲಿ ಹಲವು ಸಮಯಗಳಿಂದ ಮನನೊಂದಿರುವ, ಅಪರಿಚಿತ ಹಿರಿಯ ನಾಗರಿಕರೊರ್ವರು ಅಸಹಾಯಕ ಸ್ಥಿತಿಯಲ್ಲಿ ಬದುಕು ಸಾಗಿಸುತ್ತಿರುವುದು ಕಂಡುಬಂದಿದೆ.ವಿಚಾರಿಸಿದಾಗ ಹೆಸರು ನಿತ್ಯಾನಂದ ನಾಯಕ್ (64 ವ) ತಂದೆ ಗಣಪ ನಾಯಕ್, ಮಲ್ಲಿಗೆ ಹೌಸ್, ಎರ್ಲಪಾಡಿ ಕಾರ್ಕಳ ಇಲ್ಲಿಯ ನಿವಾಸಿ, ಈ ಹಿಂದೆ ಹೋಟೆಲಿನಲ್ಲಿ ಬಾಣಸಿಗನಾಗಿದ್ದೆ ಎಂದು ಹೇಳಿಕೊಂಡಿದ್ದು, RSB ಕೊಂಕಣಿ, ತುಳು, ಕನ್ನಡ, ಭಾಷೆ ಬಲ್ಲವರಾಗಿದ್ದಾರೆ.
ಸಂಬಂಧಿಕರು ಗಮನಿಸುವಂತೆ ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು ತಾರಾನಾಥ್ ಮೇಸ್ತ ಶಿರೂರು ವಿನಂತಿಸಿಕೊಂಡಿದ್ದಾರೆ.
