ಬ್ರಹ್ಮಾವರ: ಗೋವಿಗಾಗಿ ಮೇವು ಅಭಿಯಾನವು ಉಡುಪಿ ಜಿಲ್ಲೆಯಲ್ಲದೆ ಚಿಕ್ಕ ಮಗಳೂರು ಜಿಲ್ಲೆಯಲ್ಲಿಯೂ ಯಶಸ್ವಿಯಾಗಿರುವುದು ಅಭಿನಂದನೀಯ , ಗೋವಿಗೆ ಪ್ರತಿಯೊಬ್ಬರೂ ಗೋಗ್ರಾಸ ನೀಡಿದರೆ ಅದು ಪುಣ್ಯ ಸಂಪಾದನೆಯ ಕೆಲಸವಾಗುತ್ತದೆ. ಪ್ರತಿ ಗ್ರಾಮದಲ್ಲಿ ಗೋ ಶಾಲೆ ಪ್ರಾರಂಭವಾದರೆ ದನಗಳ ಸಂತತಿ ಮುಂದಿನ ದಿನಗಳಲ್ಲಿ ಉಳಿಸಬಹುದಾಗಿದೆ ಎಂದು ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀಥ೯ ಶ್ರೀಪಾದರು ಅನುಗ್ರಹ ಸಂದೇಶ ನೀಡಿದರು.IMG_20201115_145925
ಅವರು ನ.15ರಂದು ನೀಲಾವರ ಗೋ ಶಾಲೆಯಲ್ಲಿ ನಡೆದ ಗೋ ಪೂಜೆ ಹಾಗೂ ಗೋವಿಗಾಗಿ ಮೇವು ಅಭಿಯಾನದಡಿ ಒಣ ಹುಲ್ಲು ಅಭಿಯಾನಕ್ಕೆ ಚಾಲನೆ ನೀಡಿದರು.ಮಂದಾತಿ೯ ಕಾಮಧೇನು ಗೋ ಸೇವಾ ಬಳಗ ವತಿಯಿಂದ ಹಾಗೂ ಕರಂಬಳ್ಳಿ ಯುವಕ ಮಂಡಲ ವತಿಯಿಂದ ನಡೆದ ಈ ಕಾಯ೯ಕ್ರಮದಲ್ಲಿ ಅಭಿಯಾನದ ಪ್ರಮುಖರಾದ ಬಿಲ್ಲಾಡಿ ಪ್ರಥ್ವಿರಾಜ್ ಶೆಟ್ಟಿ ಅಭಿಯಾನ ನಡೆದು ಬಂದ ಹಾದಿಯನ್ನು ತಿಳಿಸಿದರು.ಮುಂದಿನ ದಿನಗಳಲ್ಲಿ ಈ ಒಣ ಹುಲ್ಲು ನೀಡುವ ಕಾಯ೯ ಎಲ್ಲಾ ಸಂಘ ಸಂಸ್ಥೆಗಳ ವತಿಯಿಂದ ನಿರಂತರ ನಡೆಯಲಿದೆ ಎಂದರು.ಈ ಸಂದಭ೯ದಲ್ಲಿ ನಗರಸಭಾ ಸದಸ್ಯ ಕೆ. ಗಿರಿಧರ್ ಆಚಾಯ೯, ರಾಘವೇಂದ್ರ ಕವಾ೯ಲು ಸಂಘದ  ಪ್ರಸನ್ನ ಶೆಟ್ಟಿ ಮುಂತಾದವರಿದ್ದರು.

By suddi9

Leave a Reply

Your email address will not be published. Required fields are marked *