ಮೂಡುಬಿದಿರೆ: ತಾಂತ್ರಿಕ ತರುಬೇತುಗಳನ್ನು ಪಡೆಯುವುದರಿಂದ ಯುವಕರು ಸ್ವಉದ್ಯೋಗ ಮಾಡಲು ಅವಕಾಶ ಸಿಗುತ್ತದೆ. ತಾಂತ್ರಿಕ ಕಾರ್ಯಾಗಾರ ಹಾಗೂ ತರುಬೇತಿಗಳಿಂದಾಗಿ ಇಂದಿನ ತಂತ್ರಜ್ಞಾನಕ್ಕೆ ಅನುಗುಣವಾಗಿ ಅಪ್‍ಗ್ರೇಡ್ ಆಗಬಹುದು. ಈಗಾಗಲೇ ತಾಂತ್ರಿಕ ವೃತ್ತಿಯಲ್ಲಿರುವ ಕೂಡ ನಿಗಧಿತ ಸಮಯದಲ್ಲಿ ತರಬೇತು ಪಡೆಯುವುದರಿಂದ ಅವರ ವೃತ್ತಿ ಜೀವನಕ್ಕೆ ಅನುಕೂಲವಾಗುತ್ತದೆಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.20

ಅವರು ಜೆಸಿಐ ಮೂಡುಬಿದಿರೆ ತ್ರಿಭುವನ್, ರೋಟಾರ್ಯಾಕ್ಟ್ ಕ್ಲಬ್ ಮೂಡುಬಿದಿರೆ ಹಾಗೂ ತನ್ಮಯ್ ಟೆಕ್ನಾಲಜಿ ಸಂಸ್ಥೆಯ ಜಂಟಿ ಆಶ್ರಯದಲ್ಲಿ ಮೂರು ದಿನಗಳು ನಡೆಯುವ ತಾಂತ್ರಿಕ ಕೌಶಲ ಅಭಿವೃದ್ಧಿ ತರಬೇತಿ ಶಿಬಿರವನ್ನು ಸಮಾಜಮಂದಿರದಲ್ಲಿ ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.ಜೆಸಿಐ ಮೂಡುಬಿದಿರೆ ತ್ರಿಭುವನ್ ಅಧ್ಯಕ್ಷ ಸಂತೋಷ್ ಕುಮಾರ್, ಪೂರ್ವಾಧ್ಯಕ್ಷ ಪ್ರತಾಪ್ ಕುಮಾರ್, ರೋಟಾರ್ಯಾಕ್ಟ್ ಕ್ಲಬ್‍ನ ಅಧ್ಯಕ್ಷ ಕೀತ್ ರೆಬೆಲ್ಲೊ, ಕಾರ್ಯಕ್ರಮದ ಮುಖ್ಯ ಸಂಯೋಜಕ, ತನ್ಮಯ್ ಟೆಕ್ನಾಲಜಿ ಅಧ್ಯಕ್ಷ ಪ್ರದೀಪ್ ಕುಮಾರ್ ಉಪಸ್ಥಿತರಿದ್ದರು.

ವಿನಯಚಂದ್ರ ಕಾರ್ಯಕ್ರಮ ನಿರೂಪಿಸಿದರು.ಶಿಬಿರದ ಮೊದಲ ದಿನ ರಾಜ್ಯದ ವಿವಿಧ ಜಿಲ್ಲೆಗಳಿಂದ 40ಕ್ಕೂ ಅಧಿಕ ಶಿಬಿರಾರ್ಥಿಗಳು, ತಾಂತ್ರಿಕ ವೃತ್ತಿನಿರತರು ಶಿಬಿರದಲ್ಲಿ ಭಾಗವಹಿಸಿದರು.

By suddi9

Leave a Reply

Your email address will not be published. Required fields are marked *