ಕಾಂತಾವರ : ಯುವಸಂಗಮ ಕಾಂತಾವರದ ಆಶ್ರಯದಲ್ಲಿ, ಯುವ ಉತ್ಸಾಹಿ ಬಳಗ (ರಿ.) ಕೇಮಾರು ತಂಡದ ಸಹಯೋಗದೊಂದಿಗೆ ದೀಪಾವಳಿ ಹಬ್ಬವನ್ನು ಮಿತ್ತಲಚ್ಚಿಲು ವಠಾರದಲ್ಲಿ ಸರಳ ರೀತಿಯಲ್ಲಿ ಆಚರಿಸಲಾಯಿತು.


ದೀಪಾವಳಿ ಪ್ರಯುಕ್ತ ಗೋಪೂಜೆ ಹಾಗೂ ವಾಹನ ಪೂಜೆಯನ್ನು ಜಾಕಿಬೆಟ್ಟು ಬಾಲಕೃಷ್ಣ ಭಟ್ ನೆರವೇರಿಸಿದರು.
ಬೈಕ್ ,ಆಟೋ, ಕಾರು ಸೇರಿದಂತೆ 50 ಕ್ಕೂ ಅಧಿಕ ವಾಹನಪೂಜೆಯಲ್ಲಿ ಭಾಗವಹಿಸಿದ್ದವು.

ಈ ಸಂದರ್ಭದಲ್ಲಿ ಯುವಸಂಗಮ ಕಾಂತಾವರ ಹಾಗೂ ಯುವ ಉತ್ಸಾಹಿ ಬಳಗ (ರಿ) ಕೇಮಾರು ತಂಡದ ಪದಾಧಿಕಾರಿಗಳು, ಸರ್ವಸದಸ್ಯರು ಹಾಗೂ ಊರಿನ ನಾಗರಿಕರು ಉಪಸ್ಥಿತರಿದ್ದರು.
