ಬಂಟ್ವಾಳ:ತಾಲೂಕಿನ  ವಾಮದಪದವು ದಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವಸತಿ ನಿಲಯಕ್ಕೆ ದ.ಕ.ಜಿ.ಪಂ ಅಧ್ಯಕ್ಷೆ  ಅವರ ನೇತೃತ್ವದ ನಿಯೋಗ ಬುಧವಾರ ಹಠಾತ್ ಭೇಟಿ ನೀಡಿತು. ಸ್ಥಳೀಯರ ದೂರಿನನ್ವಯ.ದ.ಕ.ಜಿ.ಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು,ಜಿಪಂ ಸದಸ್ಯ ತುಂಗಪ್ಪ ಬಂಗೇರ ಮೊದಲಾದವರು ಭೇಟಿ ನೀಡಿ ವಸತಿ ನಿಲಯದ ಕಚೇರಿ,ವಸತಿ ಕೊಠಡಿ ಹಾಗೂ ಅವರಣವನ್ನು ಪರಿಶೀಲಿಸಿದರು.

IMG-20201111-WA0069 (1)

ಈ ಸಂದರ್ಭದಲ್ಲಿ ವಸತಿ ನಿಲಯದ ವಠಾರದಲ್ಲಿ ಮದ್ಯದ ಖಾಲಿ ಬಾಟ್ಲಿಗಳ ಸಹಿತ ನಿರುಪಯುಕ್ತ ವಸ್ತುಗಳು ಕಂಡುಬಂದಿದ್ದು,ಈ ವಸತಿ ನಿಲಯದಲ್ಲಿ ರಾತ್ರಿ ವೇಳೆ  ಸಿಬ್ಬಂದಿಯೊಬ್ಬನ ಸಹಿತ ಕೆಲ ವಿದ್ಯಾರ್ಥಿಗಳು ಹಾಗೂ ಸ್ಥಳೀಯ ಇತರರು ಸೇರಿ ಮದ್ಯಸೇವನೆ ಹಾಗೂ ಮೋಜು ಮಸ್ತಿ ನಡೆಸುತ್ತಿದ್ದರೆಂದು ಸ್ಥಳೀಯರು ನೀಡಿರುವ ದೂರಿನ ಹಿನ್ನಲೆಯಲ್ಲಿ ಈ ಹಠಾತ್ ಭೇಟಿ ನೀಡಿದ್ದಾರೆ.

ಈ ಸಂದರ್ಭ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಜಿಪಂ ಅಧ್ತಕ್ಷೆ ಮೀನಾಕ್ಷಿ ಶಾಂತಿಗೋಡು ಅವರು ಈ ವಸತಿ ನಿಲಯದ ಸಿಬ್ಬಂದಿಯೊಬ್ಬನ ಸಹಿತ ಇತರರು ಇಲ್ಲಿ ಕಾನೂನು ಬಾಹಿರ ಚಟುವಟಿಕೆ ನಡೆಸುತ್ತಿರುವ ಬಗ್ಗೆ ದೂರು ಬಂದಿದ್ದು,ಈ ಹಿನ್ನಲೆಯಲ್ಲಿ ಭೇಟಿ ನೀಡಲಾಗಿದೆ.ಇದರ ಸೂಕ್ತ ಕ್ರಮಕ್ಕೆ ಜಿಲ್ಲಾ ಮಟ್ಟದ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು.

ಇದೇ ವೇಳೆ ಈ ಭಾಗದ ಜಿಪಂ ಸದಸ್ಯ ತುಂಗಪ್ಪ ಬಂಗೇರ ಅವರು ತಾಲೂಕು ಮಟ್ಟದ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ತರಾಟೆಗೆ ತೆಗೆದು ಕೊಂಡರಲ್ಲದೆ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ವಸತಿ ನಿಲಯದ ಅವ್ಯವಸ್ಥೆಯನ್ನು ಸರಿ ಪಡಿಸುವಂತೆ ಸೂಚಿಸಿದರು. ಜಿಪಂ ಅಧ್ಯಕ್ಷರ ನಿಯೋಗ ಭೇಟಿಯ ವೇಳೆ ವಸತಿ ನಿಲಯದ ಜವಾಬ್ದಾರಿತ ಅಧಿಕಾರಿಗಳ ಸಹಿತ ಸಿಬ್ಬಂದಿಗಳು ಗೈರು ಹಾಜರಾಗಿದ್ದು,ಸ್ಥಳೀಯರ ಆಕ್ರೋಶಕ್ಕು ಕಾರಣವಾಯಿತು.

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ನಿರ್ದೇಶಕಿ ಸುಲೋಚನಾ ಜಿ.ಕೆ. ಭಟ್, ಸ್ಥಳೀಯ ಪ್ರಮುಖರಾದ  ಜಯರಾಮ ಶೆಟ್ಟಿ ಕಾಪು, ಪ್ರಭಾಕರ ಶೆಟ್ಟಿ, ಪುರುಷೋತ್ತಮ ಶೆಟ್ಟಿ ವಾಮದಪದವು, ದಿನೇಶ್ ಶೆಟ್ಟಿ ದಂಬೆದಾರ್, ವಿಜಯ ರೈ ಆಲದಪದವು, ವಿನೋದ್ ಪೂಜಾರಿ, ಭೋಜರಾಜ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *