ಬಂಟ್ವಾಳ:   ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಬೆಂಗಳೂರು ಮತ್ತು ಹಾಸನ ಜಿಲ್ಲೆ ಆಲೂರು ತಾಲೂಕು ಘಟಕದ ಪ್ರಾಯೋಜಕತ್ವದಲ್ಲಿ ೩೬ನೇ ಸರಣಿ ಅಂತರ್ಜಾಲ ಆಧಾರಿತ ಅಂತಾರಾಜ್ಯ ಮಟ್ಟದ ನಾಡುನುಡಿ ಕುರಿತ ಚಿಂತನೆಗಳ ಬರಹ ಮತ್ತು ವಾಚನ ಸ್ಪರ್ಧೆಯಲ್ಲಿ ಕವಿ,ಚಿಂತಕ ಕೇ.ಕ.ಸಾ.ವೇದಿಕೆ ಬಂಟ್ವಾಳದ ಅಧ್ಯಕ್ಷ ಜಯಾನಂದ ಪೆರಾಜೆಯವರು ದ್ವಿತೀಯ ಸ್ಥಾನ ಪಡೆದಿರುತ್ತಾರೆ.

JP PHOTO (1)

ಅವರಿಗೆ ದಕ್ಷಿಣ ಕನ್ನಡ ಜಿಲ್ಲಾ ಕೇ.ಕ.ಸಾ.ವೇದಿಕೆ ಅಧ್ಯಕ್ಷ ಡಾ. ಸುರೇಶ ನೆಗಳಗುಳಿ, ಗೌರವಾಧ್ಯಕ್ಷ ಎಸ್.ಎಸ್.ನಾಯಕ್ ಮಂಗಳೂರು ಅಭಿನಂದನೆ ಸಲ್ಲಿಸಿದ್ದಾರೆ. ಪ್ರಥಮ ಸ್ಥಾನವನ್ನು ಧಾರವಾಡದ ಉಪನ್ಯಾಸಕಿ ಪಾರ್ವತಿ ಹಮ್ಮಿಗೆ, ತೃತೀಯ ಸ್ಥಾನವನ್ನು ಎಂ.ಎಸ್. ಪ್ರತಿಮಾ  ಹಳೆಬೀಡು ಪಡೆದಿರುತ್ತಾರೆ ಎಂದು ರಾಜ್ಯಾಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *