ಬಂಟ್ವಾಳ: ಬಂಟ್ವಾಳ ಪುರಸಭಾಧ್ಯಕ್ಷ ಮಹಮ್ಮದ್ ಶರೀಫ್ ಅವರು ಗುರುವಾರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಕಾರ್ಯಾಧ್ಯಕ್ಷ ಸಲೀಂ ಆಹ್ಮದ್ ರವರನ್ನು ಭೇಟಿಯಾದರು.ಕಾರ್ಯಕ್ರಮ ನಿಮಿತ್ತ ಮಂಗಳೂರಿಗೆ ಅಗಮಿಸಿದ್ದ ಖಾಸಗಿ ಹೊಟೇಲೊಂದರಲ್ಲಿ ತಂಗಿದ್ದ ಈ ಇಬ್ಬರು ನಾಯಕರನ್ನು ಭೇಟಿಯಾದರು.

ಬಂಟ್ವಾಳ ಪುರಸಭೆಗೆ ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಶರೀಫ್ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹಾಗೂ ಕಾರ್ಯಾಧ್ಯಕ್ ಆಹ್ಮದ್ ಸಲೀಂ ಅಭಿನಂದಿಸಿ,ಶುಭಹಾರೈಸಿದರು.
ಈ ಸಂದರ್ಭ ಪುರಸಭಾ ಸದಸ್ಯ ಸಿದ್ದೀಕ್ ಗುಡ್ಡೆಯಂಗಡಿ,ಮನಪಾ ಸದಸ್ಯರಾದ ಶಶಿಧರ ಹೆಗ್ಡೆ,ನವೀನ್ ಡಿಸೋಜ,ವಿನಯರಾಜ್,ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ,ಪ್ರಮುಖರಾದ ವಿಶ್ವಾಸದಾಸ್,ಉಮ್ಮರ್ ಫಾರೂಕ್ ಫರಂಗಿಪೇಟೆ ಮೊದಾಲಾದವರಿದ್ದರು
