ಬಂಟ್ವಾಳ: ಬಂಟ್ವಾಳ ಪುರಸಭೆಯಲ್ಲಿ ಕಾಂಗ್ರೇಸ್ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದ್ದು, ಇದಕ್ಕೆ ಪೂರ್ವಭಾವಿಯಾಗಿ ಕಾಂಗ್ರೆಸ್ ಎಸ್ ಡಿಪಿಐ ಜೊತೆ ಯಾವುದೇ ಸಭೆ ನಡೆದಿಲ್ಲ. ಹೋಟೆಲ್ ನಲ್ಲಿ ಮೀಟಿಂಗ್ ನಡೆದಿದೆ ಎಂದು ಆರೋಪಿಸುವ ಹರಿಕೃಷ್ಣ ಬಂಟ್ವಾಳ ಇದಕ್ಕೆ ಸೂಕ್ತ ಪುರಾವೆ ಒದಗಿಸಲಿ ಎಂದು ಮಾಜಿ ಸಚಿವ ಬಿ.ರಮಾನಥ ರೈ ಸವಾಲೆಸಿದಿದ್ದಾರೆ.

ಪಾಣೆಮಂಗಳೂರು ಬ್ಲಾಕ್ ಕಾಂಗ್ರೇಸ್ ಕಛೇರಿಯಲ್ಲಿ ಮಂಗಳವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉಳ್ಳಾಲ ನಗರ ಸಭೆಯಲ್ಲಿ ಬಿಜೆಪಿ- ಜೆಡಿಎಸ್.ಮಾಡಿದ್ದು ಒಳ ಒಪ್ಪಂದ ಮಾಡಿಕೊಂಡಿದ್ದು, ಬಂಟ್ವಾಳದಲ್ಲಿ ಅಂತದ್ದೇನು ನಡೆದಿಲ್ಲ. ಈ ಹಿಂದೆ ಬಂಟ್ವಾಳ ಪುರಸಭೆಯಲ್ಲಿ ಸಂಸದ  ನಳಿನ್ ಕುಮಾರ್ ಅವರ ಕಾರಿನಲ್ಲಿಯೇ ಎಸ್ ಡಿಪಿಐಯ ಇಬ್ಬರು ಸದಸ್ಯರನ್ನು ಕರೆದುಕೊಂಡು ಬಂದು ಬಿಜೆಪಿ ಪರ ಮತಹಾಕಿಸಿ, ಎಸ್ ಡಿ ಪಿ ಐ ಸದಸ್ಯೆ ಅಭಿನಾಬಿ ಶೇಖ್ ರನ್ನು  ಸ್ಥಾಯಿ ಸಮಿತಿ ಅಧ್ಯಕ್ಷೆ ಮಾಡಿದ್ದನ್ನು ಬಿಜೆಪಿ ನೆನಪು ಮಾಡಿಕೊಳ್ಳಲಿ ಎಂದು ರೈ ಹೇಳಿದರು.  ಗ್ರಾಪಂ. ಸದಸ್ಯರಾಗಲೂ ಯೋಗ್ಯತೆ ಇಲ್ಲ:

ತಾನು 13 ವರ್ಷ ಮಂತ್ರಿಯಾಗಿದ್ದೆ, 6 ಬಾರಿ ಶಾಸಕನಾಗಿದ್ದೆ, 8 ಸಲ ಚುನಾವಣೆಗೆ ಸ್ಪರ್ಧೆ ಮಾಡಿದ್ದೆ, ಆದರೆ ಒಂದೇ ಒಂದು ಗ್ರಾಮಪಂಚಾಯತ್ ಚುನಾವಣೆಗೆ ನಿಲ್ಲಲು ಯೋಗ್ಯತೆ ಇಲ್ಲದ ಹರಿಕೃಷ್ಣ ಬಂಟ್ವಾಳ್ ತನ್ನ ವಿರುದ್ಧ  ವೈಯುಕ್ತಿಕವಾಗಿ ಅವಮಾನಿಸುವ, ತೇಜೋವಧೆಯ ಹೇಳಿಕೆ ನೀಡುತ್ತಿದ್ದಾರೆ. ತಾನು ಈವರೆಗೆ ಪ್ರಾಮಾಣಿಕತೆಗೆ ಒತ್ತು ಕೊಟ್ಟು ಕೆಲಸ ಮಾಡಿದ್ದೇನೆ, ಹರಿಕೃಷ್ಣ ಬಂಟ್ವಾಳ ಅಥವಾ ಇನ್ಯಾರ ಹೆಸರು ಉಲ್ಲೇಖಿಸಿ ತಾನು ಈವರೆಗೆ ಆರೋಪ ಮಾಡಿಲ್ಲ, ಆದರೆ ತನ್ನ ಡಿಎನ್ ಎ ಕುರಿತಾಗಿ ಸಂಶಯದ ಹೇಳಿಕೆ ನೀಡಿ ಅತ್ಯಂತ ಹೀನಾಯವಾಗಿ ಮಾತನಾಡಿರುವ ಹರಿಕೃಷ್ಣ ಬಂಟ್ವಾಳ್ ರವರಷ್ಟು ಕೆಳಮಟ್ಟದ ವ್ಯಕ್ತಿತ್ವ ತನ್ನದಲ್ಲ ಎಂದು ರೈ ಭಾವುಕರಾಗಿ ನುಡಿದರು.

IMG-20200508-WA0053

ಶರತ್ ಮಡಿವಾಳ,  ನಾಸಿರ್,  ಆಶ್ರಫ್ , ಹರೀಶ್ ಪೂಜಾರಿ,  ಭಾರತಿ , ಅಬ್ದುಲ್ಲಾ, ಈ ರೀತಿ ಅನೇಕರ ಹತ್ಯೆ ಆಗಿದೆ. ಈ ಪೈಕಿ  ಭಾರತಿ ಹಾಗೂ ಅಬ್ದುಲ್ಲಾ ಕೊಲೆ ಪ್ರಕರಣದ ತನಿಖೆ ಸರಿಯಾಗಿ ಆಗಿಲ್ಲ  ಎಂಬುದು ಎಲ್ಲರಿಗೂ ಗೊತ್ತಿದೆ.ಅಂದು ಭಾರತಿ ಹತ್ಯೆಯ ಹಿಂದೆ ಹರಿಕೃಷ್ಣ ಬಂಟ್ವಾಳ ಅವರ ಸಂಬಂಧಿಕರಿದ್ದಾರೆ ಎಂದು ಬಿಜೆಪಿ ಹೇಳಿತ್ತೆ ಹೊರತು ನಾನು  ಹೇಳಿಲ್ಲ. ಆಗ ನನ್ನ ಹೆಸರನ್ನೂ ಸೇರಿಸಿ ಅಪಪ್ರಚಾರ ನಡೆಸಿ ನನ್ನನ್ನೂ ಸೋಲಿಸಿದ್ದರು ಎಂದು ಹೇಳಿದರು.

ಹರಿಕೃಷ್ಣ  ವಿಶ್ವಾಸ ಘಾತುಕ ವ್ಯಕ್ತಿ:
ಹರಿಕೃಷ್ಣ ಬಂಟ್ವಾಳರಂತಹ ವಿಶ್ವಾಸ ಘಾತಕ ವ್ಯಕ್ತಿ ಜಿಲ್ಲೆಯ ರಾಜಕಾರಣದಲ್ಲಿ ಬೇರೊಬ್ಬರಿಲ್ಲ ಎಂದು ಆರೋಪಿಸಿದ ರೈ,  ಚುನಾವಣೆಯಲ್ಲಿ ವಿರೋಧ ಪಕ್ಷದವರಿಂದ ಹಣ ಪಡೆದುಕೊಂಡು ವಂಚನೆ ಮಾಡುವ ಹರಿಕೃಷ್ಣ ಬಂಟ್ವಾಳ್ ಮಹಾವಂಚಕ ಎಂದು ರೈ ಟೀಕಿಸಿದರು.

ಜಿಲ್ಲೆಯ  ಶಾಸಕರೊಬ್ಬರ ಹೆಂಡತಿಯ ಹೆಸರಿನಲ್ಲಿ ಇರುವಂತಹ ಪರವಾನಿಗೆ ಹೆಸರಿನಲ್ಲಿ ಮುಡಿಪಿ ರೆಡ್ ಬಾಕ್ಸ್ ಗಣಿಗಾರಿಕೆ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದೇನೆ ಹೊರತು ಶಾಸಕರ ಹೆಸರು ಎಲ್ಲಿಯೂ ಹೇಳಿಲ್ಲ. ರೈತರೆನ್ನುವವರು ನಡೆಸುವ ಗಣಿಗಾರಿಕೆ ಕುರಿತಾಗಿ ಸೂಕ್ತ ದಾಖಲೆ ಸಿಕ್ಕಿದಾಕ್ಷಣ ಬಹಿರಂಗಪಡಿಸುವುದಾಗಿ ಅವರು ತಿಳಿಸಿದರು.
ತಾನು ನಿಷ್ಠಾವಂತ ಸಕ್ರೀಯ ಕಾಂಗ್ರೇಸ್ ಸದಸ್ಯನಾಗಿದ್ದೆನೆ, ರಾಜಕೀಯವಾಗಿ  ಜನಾರ್ದನ ಪೂಜಾರಿ ಯನ್ನು ಸೋಲಿಸಿದ ನಳಿನ್ ಕುಮಾರ್ ಜೊತೆ ಸೇರಿದ್ದು, ನಾನಾ ಅಥವಾ ಹರಿಕೃಷ್ಣ ಬಂಟ್ವಾಳರಾ ಎಂಬುದನ್ನು ಜನತೆ  ನೆನಪು ಮಾಡಲಿ ಎಂದ ಅವರು ಹರಿಕೃಷ್ಣ ಬಂಟ್ವಾಳ ಅವರು ನನ್ನ ಪ್ರತಿ ಚುನಾವಣೆಯಲ್ಲಿ ವಂಚನೆ ಮಾಡಿದ್ದಾರೆ. ನನಗೆ ಮಾತನಾಡಲು ಗೊತ್ತಿದೆ ಎಂದು ಅಹಂಕಾರದ ಮನೋಭಾವನೆ ಸರಿಯಲ್ಲ ಎಂದು ರೈ ಹರಿಕೃಷ್ಣ ಬಂಟ್ವಾಳ್ ವಿರುದ್ಧ ಟೀಕಾಪ್ರಹಾರಗೈದರು.

ಜನರಿಂದ ಚುನಾಯಿತನಾಗಿದ್ದ  ನಾನು, ಸುದೀರ್ಘ ಅವಧಿಯಲ್ಲಿ ರಾಜಕೀಯದಲ್ಲಿ ಕೆಲಸ ಮಾಡಿದ್ದೆನೆ.ಜನಾರ್ಧನ ಪೂಜಾರಿಗೆ ಚುನಾವಣೆಯಲ್ಲಿ ಸಮಸ್ಯೆ ಮಾಡಿದ್ದ ವಿಶ್ವಾಸ ಘಾತುಕ ವ್ಯಕ್ತಿ ಹರಿಕೃಷ್ಣ ಬಂಟ್ವಾಳ್ ರಿಂದ ಮುಂದಿನ ದಿನಗಳಲ್ಲಿ ನಳಿನ್ ಹಾಗೂ ರಾಜೇಶ್ ನಾಯ್ಕ್ ಅವರಿಗೂ  ಖಂಡಿತವಾಗಿ ಯೂ ಕೆಡುಕು ಎದುರಾಗುತ್ತದೆ.‌ಅವರೂ ಎಚ್ಚರಿಕೆ ವಹಿಸಬೇಕೆಂದು ರೈ  ಭಾವನಾತ್ಮಕವಾಗಿ ನುಡಿದರು.

ಪತ್ರಿಕಾ ಗೋಷ್ಠಿಯಲ್ಲಿ ಪುರಸಭಾಧ್ಯಕ್ಷ ಮಹಮ್ಮದ್‌ ಶರೀಫ್, ಉಪಾಧ್ಯಕ್ಷೆ ಜೆಸಿಂತಾ, ಜಿ.ಪಂ.ಸದಸ್ಯರಾದ ಎಂ.ಎಸ್.ಮಹಮ್ಮದ್, ಚಂದ್ರಪ್ರಕಾಶ್ ಶೆಟ್ಟಿ, ಪದ್ಮಶೇಖರ್ ಜೈನ್, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ಸುದೀಪ್ ಕುಮಾರ್ ಶೆಟ್ಟಿ, ಬೇಬಿ ಕುಂದರ್, ಮಾಯಿಲಪ್ಪ ಸಾಲ್ಯಾನ್  ಮೊದಲಾದವರಿದ್ದರು.

By suddi9

Leave a Reply

Your email address will not be published. Required fields are marked *