ಬಂಟ್ವಾಳ: ಬಿ.ಸಿ.ರೋಡಿಗೆ ಸಮೀಪದ ಪೊಳಲಿ ದ್ವಾರದ ಕೈಕಂಬ ಬಳಿ   ವಿಧಾನಪರಿಷತ್ ಸದಸ್ಯರಾದ ಯು. ಬಿ ವೆಂಕಟೇಶ್ ರವರ 2019-20 ನೇ ಸಾಲಿನ ಪ್ರದೇಶಾಭಿವೃದ್ಧಿ ಯೋಜನೆಯಡಿ ನಿರ್ಮಿಸಲಾದ ಆಟೋರಿಕ್ಷಾ ತಂಗುದಾಣದ  ಉದ್ಘಾಟನಾ ಸಮಾರಂಭ ಮಂಗಳವಾರ ನಡೆಯಿತು. ಮಾಜಿ  ಸಚಿವರಾದ ಬಿ. ರಮಾನಾಥ ರೈ ಯವರು ರಿಕ್ಷಾ ತಂಗುದಾಣವನ್ನು ಉದ್ಘಾಟಿಸಿ ಮಾತನಾಡಿ, ತನ್ನ ಶಾಸಕತ್ವದ ಅವಧಿಯಲ್ಲಿ ಬಂಟ್ವಾಳ ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸಿದ್ದು,  ತಾನೀಗ ಶಾಸಕನಲ್ಲದಿದ್ದರೂ,ವಿ.ಪ.ಸದಸ್ಯ ವೆಂಕಟೇಶ್ ಅವರ ಅನುದಾನವನ್ನು ಬಳಸಿಕೊಂಡು ಈ ಹಿಂದೆ  ಕಾರ್ಮಿಕ ವರ್ಗಕ್ಕೆ  ಕೊಟ್ಟ ಮಾತಿನಂತೆ ರಿಕ್ಷಾ ತಂಗುದಾಣ ನಿರ್ಮಾಣದ  ತಮ್ಮ ಭರವಸೆಯನ್ನು ಈಡೇರಿಸಲಾಗಿದೆ.

IMG-20201110-WA0033

ಸಾರ್ವಜನಿಕರು ಇದರ ಸದುಪಯೋಗ ಪಡೆಯುವಂತೆ ತಿಳಿಸಿದರು. ಪುರಸಭಾಧ್ಯಕ್ಷ ಮಹಮ್ಮದ್ ಶರೀಫ್ ಸಭಾಧ್ಯಕ್ಷತೆ ವಹಿಸಿ ಮಾಜಿ ಸಚಿವ ರೈ ಅವರ ಇಚ್ಚಾಶಕ್ತಿಯಿಂದ ಈ ಭಾಗದ ರಸ್ತೆ ಅಗಲೀಕರಣ,ರಿಕ್ಷಾ ತಂಗುದಾಣದ ನಿರ್ಮಾಣವಾಗಿದೆ ಎಂದರು. ಪುರಸಭಾ ಉಪಾಧ್ಯಕ್ಷೆ ಜೆಸಿಂತಾ ಡಿಸೋಜ,ಜಿಪಂ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ,ಪದ್ಮಶೇಖರ ಜೈನ್,

IMG-20201110-WA0056

ಎಂ.ಎಸ್.ಮಹಮ್ಮದ್,ತಾಪಂ ಉಅಧ್ಯಕ್ಷ ಅಬ್ಬಾಸ್ ಆಲಿ,ಸ್ಥಾಯಿ ಸಮಿತಿ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿಕುಂದರ್,ಸುದೀಪ್ ಕುಮಾರ್ ಶೆಟ್ಟಿ,ಯುವಕಾಂಗ್ರೆಸ್ ಅಧ್ಯಕ್ಷ ಪ್ತಶಾಂತ್ ಕುಲಾಲ್,ಮಾಜಿ ಬೂಡಾ ಅಧ್ಯಕ್ಷ ಸದಾಶಿವ ಬಂಗೇರ,ಪ್ರಮುಖರಾದ ಮಾಯಿಲಪ್ಪ ಸಾಲ್ಯಾನ್ ,ವೆಂಕಪ್ಪ ಪೂಜಾರಿ,ಪುರಸಭಾ ಸದಸ್ಯರಾದ ಗಂಗಾಧರ,ಸಿದ್ದೀಕ್,ಲೋಲಾಕ್ಷ ಶೆಟ್ಟಿ,ಲುಕ್ಮಾನ್, ಗಾಯತ್ರಿ ,ಹಸೈನಾರ್ ಮೊದಲಾದವರಿದ್ದರು.

By suddi9

Leave a Reply

Your email address will not be published. Required fields are marked *