ಕೈಕಂಬ : ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಸರ್ವಮಂಗಳಾ ಸಭಾಂಗಣದಲ್ಲಿ ಇತ್ತೀಚೆಗೆ ಲಯನ್ಸ್ ಕ್ಲಬ್ ಮಂಗಳೂರು(ಮಂಗಳಾದೇವಿ) ಇವರ ನೇತೃತ್ವದಲ್ಲಿ ನೇತ್ರದಾನ ನೋಂದಣಿ, ಉಚಿತ ನೇತ್ರ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ನಡೆಯಿತು.
ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಶಾಲಿಟಿ ಕಣ್ಣಿನ ಆಸ್ಪತ್ರೆ(ಮಂಗಳುರು, ಉಡುಪಿ), ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್(ಉಡುಪಿ), ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ-ಅಂಧತ್ವ ವಿಭಾಗ(ಮಂಗಳೂರು), ಡಾ. ಪಿ ದಯಾನಂದ ಪೈ ಮತ್ತು ಪಿ ಸತೀಶ್ ಪೈ ಚಾರಿಟೇಬಲ್ ಟ್ರಸ್ಟ್(ರಿ), ಸೆಂಚೂರಿ ಗ್ರೂಪ್ಸ್(ಬೆಂಗಳೂರು), ಎಸ್ ಆರ್ ಹಿಂದೂ ಫ್ರೆಂಡ್ಸ್ ಪೊಳಲಿ ಇವರ ಜಂಟಿ ಆಶ್ರಯದಲ್ಲಿ ಈ ಶಿಬಿರ ಜರುಗಿದ್ದು, ಲ. ಡಾ. ಗೀತ್‌ಪ್ರಸಾದ್(ಜಿಲ್ಲಾ ರಾಜ್ಯಪಾಲರು ಲಯನ್ಸ್ ಜಿಲ್ಲೆ ೩೧೭ ಡಿ) ಶಿಬಿರ ಉದ್ಘಾಟಿಸಿದರು. ನೇತ್ರಾಲಯ ವೈದ್ಯಾಧಿಕಾರಿ ಪ್ರಕಾಶ್ ಸಂಪನ್ಮೂಲ ವ್ಯಕ್ತಿಯಾಗಿದ್ದರು.
ಶಿಬಿರದಲ್ಲಿ ಗಾಯತ್ರಿ ಡಾ. ಗೀತಪ್ರಸಾದ್(ಪ್ರಥಮ ಮಹಿಳೆ), ಲ. ಚಂದ್ರಹಾಸ ಕದ್ರಿ(ಅಧ್ಯಕ್ಷ), ಭಾರತಿ ವಿ ಶೆಟ್ಟಿ(ಕಾರ್ಯದರ್ಶಿ), ಖಜಾಂಚಿ ಪ್ರದೀಪ್ ಕುಮಾರ್ ಶೆಟ್ಟಿ(ಎಂಜೆಎಫ್), ಡಾ. ವಿಶಾಲ್(ಪ್ರಸಾದ್ ನೇತ್ರಾಲಯ), ಸೈಯದ್(ಪಿಆರ್‌ಒ) ಹಾಗೂ ನೇತ್ರಾಲಯದ ವೈದ್ಯರು, ಸಹಾಯಕರು ಉಪಸ್ಥಿತರಿದ್ದು, ಸಹಕರಿಸಿದರು.
