ಬಂಟ್ವಾಳ ಕಸ್ಬಾ ಗ್ರಾಮದ ನಿಕೇತ್ ಆರ್. ಕುಲಾಲ್ ಎಂಬವರಿಗೆ ವೈದ್ಯಕೀಯ ಚಿಕಿತ್ಸೆಗಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಬಿಡುಗಡೆಯಾದ ರೂ32ಸಾವಿರ ಮೊತ್ತದ ಚೆಕ್ಕನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಶನಿವಾರ ವಿತರಿಸಿದರು. ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ತಾ.ಪಂ. ಸದಸ್ಯರಾದ ಮಾಧವ ಎಸ್.ಮಾವೆ, ಸಂಪತ್ಕುಮಾರ್ ಶೆಟ್ಟಿ, ಅಕ್ರಮ- ಸಕ್ರಮ ಸಮಿತಿ ಅಧ್ಯಕ್ಷ ಕೆ.ಮಾಯಿಲಪ್ಪ ಸಾಲ್ಯಾನ ಮತ್ತಿತರರು ಇದ್ದರು.

