ಬಂಟ್ವಾಳ: ಭಂಡಾರಿ ಬೆಟ್ಟುವಿನ ವಸ್ತಿ ಅಪಾರ್ಟ್ ಮೆಂಟ್ ನಲ್ಲಿ ನಡೆದ ನಟ ಸುರೇಂದ್ರ ಭಂಡಾರಿ ಹತ್ಯೆಗೆ ಸಂಬಂದಿಸಿದಂತೆ ಇಬ್ಬರನ್ನು ಬಂಟ್ವಾಳ ಪೊಲೀಸರು ವಶಪಡಿಸಿಕೊಂಡು ತೀವ್ರ ತನಿಖೆಗೆ ಗುರಿಪಡಿಸಿದ್ದಾರೆ.
ದ.ಕ. ಜಿಲ್ಲಾ ಎಸ್ಪಿ ಲಕ್ಷ್ಮೀ ಪ್ರಸಾದ್ ಅವರ ನಿರ್ದೇಶನದಲ್ಲಿ ಬಂಟ್ವಾಳ ಇನ್ಸ್ ಪೆಕ್ಟರ್ ನಾಗರಾಜ್ ರವರು ಪ್ರಕರಣದ ತನಿಖೆ ನಡೆಸುತ್ತಿದ್ದು, ಆರೋಪಿಗಳ ಪತ್ತೆಗೆ ಎಸ್ ಐ ಗಳಾದ ಅವಿನಾಶ್,ಪ್ರಸನ್ನ, ನಂದಕುಮಾರ್, PSI ವಿನೋದ್, ರಾಜೇಶ್, ಕಲೈಮಾರ್, ಪಿಐ ರವಿ ಮತ್ತು ಡಿಸಿಐಬಿ ಸಿಬ್ಬಂದಿಗಳನ್ನು ಒಳಗೊಂಡ ಒಟ್ಟು 5 ವಿಶೇಷ ಪತ್ತೆ ತಂಡಗಳನ್ನು ರಚಿಸಿದ್ದು ವಿವಿಧ ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ.ಖಚಿತ ಮಾಹಿತಿಯನ್ವಯ ಪ್ರಕರಣದ ಆರೋಪಿಗಳಾದ ಬಂಟ್ವಾಳ ತಾ.ನ ಅಮ್ಟಾಡಿ ಗ್ರಾಮದ ಅಜೆಕಲ ನಿವಾಸಿ
ಸತೀಶ್ ಕುಲಾಲ್ (39 ) ಹಾಗೂಮಂಗಳೂರು ನೀರುಮಾರ್ಗ ಬೋಂಡಂತಲ ನಿವಾಸಿಗಿರೀಶ್ ( 28) ಎಂಬವರನ್ನು ವಶಕ್ಕೆ ಪಡೆದಿರುವ ಬಂಟ್ವಾಳ ಪೊಲೀಸರು ವಿಚಾರಣೆಗೆ ಗುರಿಪಡಿಸಿದ್ದು,ಹಲವು ಮಹತ್ವದ ಮಾಹಿತಿಯನ್ನು ಸಂಗ್ರಹಿಸಿದ್ದಾರೆ. ಎರಡು ದಿನಗಳ ಬಳಿಕ ಈ ಕೃತ್ಯದ ಪ್ರಮುಖ ಆರೋಪಿಯೆಂದು ಗುರುತಿಸಲಾದ ಸತೀಶ್ ನ ವಾಯ್ಸ್ ರೇಕಾಡ್೯
