ಬಂಟ್ವಾಳ:ಅಪೂರ್ವ ಕರೆನ್ಸಿಗಳು ಹಾಗೂ ಪುರಾತನ ವಸ್ತುಗಳ ಸಂಗ್ರಹವಿರುವ ಕಲ್ಲಡ್ಕ ಮ್ಯೂಸಿಯಂ ಗೆ ಬೆಂಗಳೂರಿನ ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ಸ್ ಸಂಸ್ಥೆಯ ಕಲಾಶಿಕ್ಷಣ ವಿಭಾಗದ ಕಾರ್ಯಕ್ರಮ ಅಧಿಕಾರಿ ಕೃಷ್ಣಮೂರ್ತಿ ಯವರು ಇತ್ತೀಚೆಗೆ ಭೇಟಿ ನೀಡಿದರು. ಅತ್ಯಪೂರ್ವ ಸಂಗ್ರಹಗಳು ಕೇವಲ ವಸ್ತು ಗಳಲ್ಲ, ಪ್ರತಿಯೊಂದು ವಸ್ತು ವಿಚಾರದ ಹಿಂದೆ ಕಳೆದು ಹೋದವರ ಬದುಕಿನ ಕತೆ ಅಡಗಿದೆ. ಇದು ಮತ್ತಷ್ಟು ವಿಸ್ತಾರತೆ ಪಡೆದುಕೊಳ್ಳಲಿ ಎಂದವರು ಮೆಚ್ಚುಗೆ ವ್ಯಕ್ತಪಡಿಸಿದರು.
ಕರೆನ್ಸಿ ಸಂಗ್ರಾಹಕ, ಕಲ್ಲಡ್ಕ ಮ್ಯೂಸಿಯಂ ಸ್ಥಾಪಕ ಯಾಸಿರ್ ಕಲ್ಲಡ್ಕ, ಐಎಫ್ ಎ ಗ್ರ್ಯಾಂಟಿ , ಪತ್ರಕರ್ತ ಮೌನೇಶ ವಿಶ್ವಕರ್ಮ ಈ ಸಂದರ್ಭ ಉಪಸ್ಥಿತರಿದ್ದರು.
