ಬಂಟ್ವಾಳ: ವಿಶ್ವಹಿಂದುಪರಿಷತ್, ಬಜರಂಗದಳ ಛತ್ರಪತಿ ಶಾಖೆ, ಬ್ರಹ್ಮರಕೂಟ್ಲು ಘಟಕದ ವತಿಯಿಂದ ಬ್ರಹ್ಮರಕೂಟ್ಲುವಿನ ರಿಕ್ಷಾ ತಂಗುದಾಣದ ಬಳಿ ನಿರ್ಮಿಸಲಾದ “ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ”ಯನ್ನು ಭಾನುವಾರ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅನಾವರಣಗೊಳಿಸಿದರು. ಬಳಿಕ ಮಾತನಾಡಿದ ಶಾಸಕರುಶಿವಾಜಿ ಮಹಾರಾಜರ ಪ್ರತಿಮೆ ಕಣ್ಣೆದುರು ಕಂಡಾಗ ಯುವಕರ ಮನಸ್ಸಿನಲ್ಲಿ ತನ್ನಿಂತಾನೇ ಶಿವಾಜಿ ಮಹಾರಾಜರ ಆದರ್ಶ ಗುಣಗಳು ಜಾಗೃತವಾಗಿ, ಹಿಂದೂ ಸಮಾಜವನ್ನು ಒಗ್ಗೂಡಿಸಿ ಮುನ್ನಡೆಸುವ ನಾಯಕತ್ವ ಗುಣ ಮೈಗೂಡಿಸಿಕೊಳ್ಳಲು ಸಹಕಾರಿಯಾಗುವುದು ಎಂದು ಆಶಯವನ್ನು ವ್ಯಕ್ತಪಡಿಸಿ ಶುಭ ಹಾರೈಸಿದರು.
ಜಿಲ್ಲಾ ಪಂಚಾಯತ್ ಸದಸ್ಯ ರವೀಂದ್ರ ಕಂಬಳಿ, ತಾಪಂ ಸದಸ್ಯ ಗಣೇಶ್ ಸುವರ್ಣ,ವಿ.ಹಿಂ.ಪ , ಬಜರಂಗದಳ ಪ್ರಮುಖರಾದ ಶರಣ್ ಪಂಪ್ ವೆಲ್, ಅಶೋಕ್ ಶೆಟ್ಟಿ ಸರಪಾಡಿ, ಗುರುರಾಜ್ ಬಂಟ್ವಾಳ, ಭೋಜ ಪೂಜಾರಿ ದರಿಬಾಗಿಲು, ಹಿಂದೂ ಜಾಗರಣ ವೇದಿಕೆ ಪ್ರಮುಖರಾದ ವಿಜಯ್ ತುಂಬೆ, ಯೋಗೀಶ್ ಕಡೆಗೋಳಿ, ಸುಶಾನ್ ಬೊಳ್ಳಾರಿ, ಪ್ರಮುಖರಾದ ಸಂಪ್ರೀತ್ ಆಯರಗುಡ್ಡೆ, ಮನೋಜ್ ವಳವೂರು, ಮನೋಹರ ಕಂಜತ್ತೂರು, ಅಜಿತ್ ವಳವೂರು, ಪ್ರಸಾದ್ ವಳವೂರು, ಸಮ್ಮಿತ್ ಬ್ರಹ್ಮರಕೂಟ್ಲು, ಸುಶಾಂತ್ ವಳವೂರು ಮತ್ತಿತರರು ಉಪಸ್ಥಿತರಿದ್ದರು.
