ಬಂಟ್ವಾಳ:ಗ್ರಾಮೀಣ ಅಭಿವೃದ್ಧಿಗೆ ಬಿಜೆಪಿ ಸಿದ್ದವಾಗಿದ್ದು, ಬಂಟ್ವಾಳ ಕ್ಷೇತ್ರದ ಪ್ರತಿ ಗ್ರಾಮದ ಅಭಿವೃದ್ದಿಗೆ ಕೋಟಿ, ಕೋಟಿ ಅನುದಾನ ಒದಗಿಸಲಾಗಿದೆ ಎಂದು ಬಂಟ್ವಾಳ ಶಾಸಕ ಯು.ರಾಜೇಶ್ ನಾಯ್ಕ್ ಉಳಿಪಾಡಿ ತಿಳಿಸಿದ್ದಾರೆ. ಬಂಟ್ವಾಳ ತಾ.ನ ಮಣಿನಾಲ್ಕುರು ಗ್ರಾಮದ ಮಾವಿನಕಟ್ಟೆಯಲ್ಲಿ ನಡೆದ ಬಿಜೆಪಿ ಕುಟುಂಬ ಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ಕ್ಷೇತ್ರದ ಎಲ್ಲಾ ಪಂಚಾಯತ್ ಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಗೆಲುವಿಗಾಗಿ ಕಾರ್ಯಕರ್ತರು ಶ್ರಮಿಸುವಂತೆ ಕರೆ ನೀಡಿದರು.ಬಂಟ್ವಾಳ ಕ್ಷೇತ್ರ ಬಿಜೆಪಿ ಅದ್ಯಕ್ಷ ದೇವಪ್ಪ ಪೂಜಾರಿಯವರು ವಹಿಸಿದ್ದರು.
ಬಂಟ್ವಾಳ ಕ್ಷೇತ್ರದ ಗ್ರಾಮ ಪಂಚಾಯತ್ ಚುನಾವಣಾ ಪ್ರಭಾರಿ ದೇವದಾಸ್ ಶೆಟ್ಟಿ , ಸಹ ಪ್ರಬಾರಿ ಪ್ರಭಾಕರ ಪ್ರಭು, ಬಿಜೆಪಿ ಪ್ರದಾನ ಕಾರ್ಯದರ್ಶಿ ಡೊಂಬಯ ಅರಳ, ಬಿಜೆಪಿ ಯುವ ಮೋರ್ಚಾ ಜಿಲ್ಲಾ ಪ್ರದಾನ ಕಾರ್ಯದರ್ಶಿ ಸುದರ್ಶನ್ ಬಜ, ಮಂಡಲ ಉಪಾಧ್ಯಕ್ಷ ಚಿದಾನಂದ ರೈ, ಮಾದ್ಯಮ ಪ್ರಮುಖ ರಂಜಿತ್ ಮೈರ, ಸರಪಾಡಿ ಮಹಾ ಶಕ್ತಿ ಕೇಂದ್ರ ದ ಪ್ರದಾನ ಕಾರ್ಯದರ್ಶಿ ಹರೀಶ್ ಪ್ರಭು, ಜಿಲ್ಲಾ ರೈತ ಮೋರ್ಚಾ ಕಾರ್ಯ ದರ್ಶಿ ಪುರುಷೋತ್ತಮಮಜಲ್, ಗ್ರಾಮದ ಚುನಾವಣೆ ಸಹ ಪ್ರಭಾರಿ ಶಾಂತಪ್ಪ ಪೂಜಾರಿ, ಹಿರಿಯ ಕಾರ್ಯ ಕರ್ತ ಸುಂದರ ನಾಯ್ಕ, ರಾಮಕೃಷ್ಣ ಮಯ್ಯ, ಪ್ರಮುಖ ರಾದ ನಾರಾಯಣ ಪೂಜಾರಿ ಬೊಳ್ಳು ಕಲ್ಲು, ಆಶೋಕ್ ಶೆಟ್ಟಿ ಸರಪಾಡಿ ,ಮೋನಪ್ಪ ಪೂಜಾರಿ, ನಾಗೇಶ್ ನೈಬೆಲ್, ಪ್ರಶಾಂತ್ ನಾಯ್ಕ್, ಜಯ ನಾಯ್ಕ್, ತಿಲಕ ಬಂಗೇರ, ಜಯರಾಮ ಅಡಪ, ದೇವದಾಸ್ ನಾಯ್ಕ, ರಾಜೇಂದ್ರ ಕಡಮಜೆ, ಕೇಶವ, ದರೆ ನೇಂದ್ರ ಜೈನ್, ಮೊದಲಾದವರು ಉಪಸ್ಥಿತರಿದ್ದರು, ಸಾಯಿ ಶಾಂತಿ ಕೋಕಲ ಸ್ವಾಗತಿಸಿದರು.ಪೂವಪ್ಪ ಪೂಜಾರಿ ಕಡ ಮಜೆ ವಂದಿಸಿದರು, ಧನಂಜಯ ಶೆಟ್ಟಿ ಕಾರ್ಯ ಕ್ರಮ ನಿರೂಪಿಸಿದರು.
