ಬಂಟ್ವಾಳ: ಪಣೋಲಿಬೈಲು ದೈವಸ್ಥಾನದ ಅನುವಂಶಿಕ ಎರಡನೇ ಅರ್ಚಕ ರಮೇಶ್‌ ಮೂಲ್ಯ (55)ಅವರು ಇಂದು ಬೆಳಿಗ್ಗೆ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ವಿಧಿ ವಶರಾದರು.
ಅವರು ಕಳೆದ ಎರಡು ವಾರಗಳಿಂದ ನ್ಯುಮೋನಿಯಾ ಜ್ವರದಿಂದ ಬಳಲುತ್ತಿದ್ದು, ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಅವರು ನಿನ್ನೆ ರಾತ್ರಿಯಿಂದ ಚಿಕಿತ್ಸೆಗೆ ಸ್ಪಂದಿಸಿದ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ಮೃತಪಟ್ಟಿದ್ದಾರೆ.IMG-20201021-WA0064
ಪತ್ನಿ ಮತ್ತು ಎರಡು ಗಂಡು ಒಂದು ಹೆಣ್ಣು ಹಾಗೂ ಮೊಮ್ಮಗಳು ಮತ್ತು ಅಪಾರ ಬಂಧುಗಳನ್ನು ಅವರು ಅಗಲಿದ್ದಾರೆ.ರಮೇಶ್ ಅವರ ಪಾರ್ಥಿವ ಶರೀರವನ್ನು ಅವರ ಪಣೋಲಿಬೈಲಿನಲ್ಲಿರುವ ಮನೆಗೆ 10.30 ರ ವೇಳೆ ತರಲಿದ್ದು ಬಳಿಕ ಕಂಚಿನಡ್ಕ ಪದವಿನ ಸ್ಮಶಾನ ಭೂಮಿಯಲ್ಲಿ ಅಂತಿಮ ಸಂಸ್ಕಾರ ನಡೆಯುತ್ತದೆ ಎಂದು ಅವರ ಮಗ ಲೋಹಿತ್ ಪಣೋಲಿಬೈಲು ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *