ಬಂಟ್ವಾಳ: ಬೀಡಿ ಕಂಟ್ರಾಕ್ಟ್ ದಾರರ ಸಂಘದ ನೇತೃತ್ವದಲ್ಲಿ ಸೌತ್ ಕೆನರಾ ಹೋಮ್ ಇಂಡಸ್ಟ್ರೀಸ್ ಬಿ.ಸಿ.ರೋಡು ಡಿಪೋ ದಲ್ಲಿ ಸೇವೆಗೈದು ನಿವೃತ್ತಿ ಹೊಂದಿದ ಪಾಲುದಾರ ಸುಧಾಕರ ಶೆಣೈ ಮತ್ತು ಮೂವರು ಸಿಬ್ಬಂದಿ ಗಳಾದ ಜಗದೀಶ್ ಪೈ ಬಂಟ್ವಾಳ, ಸದಾನಂದ ಪಾಣೆಮಂಗಳೂರು, ಪ್ರಕಾಶ್ ಶೆಣೈ ಬಿ.ಸಿ.ರೋಡು ಅವರನ್ನು ಹೃದಯಸ್ಪರ್ಶಿಯಾಗಿ ಗೌರವಿಸಿ ಬೀಳ್ಕೊಡಲಾಯಿತು.

ಕಂಪನಿಯ ಪಾಲುದಾರ ಉಮೇಶ್ ಶೆಣೈ ಅವರು ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದರು. ಬಳಿಕ ಮಾತನಾಡಿದ ಅವರು ಸಂಸ್ಥೆಯ ಅಭಿವೃದ್ಧಿಗಾಗಿ ಸಿಬ್ಬಂದಿಗಳು ಶ್ರಮವಹಿದರೆ ಅದರ ಪಾಲು ಕಂಪೆನಿಯ ಸರ್ವ ವಿಭಾಗಕ್ಕೂ ಸಿಗಲಿದೆ ಎಂದರು.
ಈ ಸಂದರ್ಭದಲ್ಲಿ ಬೀಡಿ ಕಂಟ್ರಾಕ್ಟ್ ದಾರರ ಸಂಘದ ಗೌರವಾಧ್ಯಕ್ಷ ಬಾಬು ಪೂಜಾರಿ ಮಾರ್ನಬೈಲು, ಸಂಸ್ಥೆ ಯ ಮ್ಯಾನೇಜರ್ ಕೂಸಪ್ಪ ಮೂಲ್ಯ, ಸಂಘದ ಪ್ರಮುಖರಾದ ವಿಶ್ವನಾಥ ಕೊಟ್ಟಾರಿ ಸಜೀಪ ಮುನ್ನೂರು, ಹರೀಶ್ ತುಳಸಿವನ, ಸುಧಾಕರ ಆಚಾರ್ಯ, ಇಂದ್ರೇಶ್ ಸಂಚಯಗಿರಿ, ಉಂಜ್ಞಾ ನಂದಾವರ, ನಜೀರ್ ನಂದಾವರ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು. ಪ್ರಶಾಂತ್ ಕೊಟ್ಟಾರಿ ಸ್ವಾಗತಿಸಿ, ವಂದಿಸಿದರು.
