ಬಂಟ್ವಾಳ:ಉತ್ತರ ಪ್ರದೇಶದ ಹಾಥರಸ್ ನಲ್ಲಿ ದಲಿತ ಯುವತಿ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಿ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ನೀಡುವಲ್ಲಿ ಅಲ್ಲಿನ ಸಂರ್ಕಾರ ಸಂಫೂರ್ಣ ವಿಫಲವಾಗಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ಆರೋಪಿಸಿದೆ.

9btl-PFI
ಇಲ್ಲಿನ ಬಿ.ಸಿ.ರೋಡು ಮಿನಿವಿಧಾನಸೌಧ ಎದುರು ಪಿಎಫ್ ಐ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲಿನ ಸರ್ಕಾರವು ತನ್ನ ತಪ್ಪು ಮರೆ ಮಾಚಲು ಪಿಎಫ್ ಐ ಸಂಘಟನೆ ವಿರುದ್ಧ ಆಧಾರ ರಹಿತ ಆರೋಪ ಹೊರಿಸಿ ಮಾನಹಾನಿ ಅಭಿಯಾನ ಕೈಗೆತ್ತಿಕೊಂಡಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ದೇಶದ ಕಾನೂನು ಮತ್ತು ಸಂವಿಧಾನ ಗೌರವಿಸುವ ಪಿಎಫ್ ಐ ಸಂಘಟನೆ ಪ್ರಜಾಸತಾತ್ಮಕ ಹೋರಾಟಗಳಲ್ಲಿ ನಂಬಿಕೆ ಇಟ್ಟಿದೆ ಎಂದರು.

By suddi9

Leave a Reply

Your email address will not be published. Required fields are marked *