ಬಂಟ್ವಾಳ:ಗ್ರಾಮೀಣ ಮತ್ತು ನಗರ ಪ್ರದೇಶ ಅಭಿವೃದ್ಧಿ ಜೊತೆಗೆ ಒಟ್ಟು ದೇಶದ ಏಳಿಗೆ ಬಗ್ಗೆ ಅವಿರತ ಶ್ರಮವಹಿಸುತ್ತಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಕೇಳಿದಷ್ಟು ಅನುದಾನ ಮಂಜೂರುಗೊಳಿಸುತ್ತಿದ್ದಾರೆ. ಮುಂದಿನ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಎಲ್ಲೆಡೆ ಬಿಜೆಪಿ ಅಭ್ಯರ್ಥಿಗಳು ಗೆದ್ದರೆ ಮತ್ತಷ್ಟು ಗ್ರಾಮೀಣ ಪ್ರದೇಶಗಳು ಅಭಿವೃದ್ಧಿಯಾಗಲಿದೆ ಎಂದು ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಹೇಳಿದ್ದಾರೆ.9BTL-BJP

ಇಲ್ಲಿನ ಕೊಯಿಲ ಗ್ರಾಮದ ಪಿಲ್ಕಾಜೆಗುತ್ತು ಎಂಬಲ್ಲಿ ಗುರುವಾರ ನಡೆದ ‘ಬಿಜೆಪಿ ಕುಟುಂಬ ಮಿಲನ ಕಾರ್ಯಕ್ರಮ’ ಉದ್ಘಾಟಿಸಿ ಅವರು ಮಾತನಾಡಿದರು. ಬಿಜೆಪಿ ಕ್ಷೇತ್ರಾಧ್ಯಕ್ಷ ದೇವಪ್ಪ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬೂಡ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ ಮತ್ತು ಬಿಜೆಪಿ ಪ್ರಧಾನ ಕಾರ್ಯದರ್ಶಿ ಡೊಂಬಯ ಬಿ.ಅರಳ ಇವರು ಕೇಂದ್ರ ಮತ್ತು ರಾಜ್ಯ ಸರ್ಕಾರ ಕೈಗೊಂಡ ಜನಪರ ಯೋಜನೆಗಳನ್ನು ವಿವರಿಸಿದರು.

ಸಂಗಬೆಟ್ಟು ಮಹಾಶಕ್ತಿ ಕೇಂದ್ರ ಅಧ್ಯಕ್ಷ ಸೀತಾರಾಮ ಪೂಜಾರಿ, ಚುನಾವಣಾ ಸಹ ಪ್ರಭಾರಿ ಪ್ರಭಾಕರ ಪ್ರಭು ಪ್ರಮುಖರಾದ ಚಿದಾನಂದ ರೈ, ರತ್ನಕುಮಾರ್ ಚೌಟ, ರಶ್ಮಿತ್ ಶೆಟ್ಟಿ ಕೈತ್ರೋಡಿ, ಬಿ.ದಯಾನಂದ ಸಪಲ್ಯ, ಪುರುಷೋತ್ತಮ ಶೆಟ್ಟಿ, ಶೇಖರ ಅಂಚನ್, ಹರೀಶ್ ಆಚಾರ್ಯ, ಪರಮೇಶ್ವರ ಪೂಜಾರಿ, ಮಧುಕರ ಬಂಗೇರ, ರಾಘವ ಅಮೀನ್, ದಿನೇಶ್ ಶೆಟ್ಟಿ ದಂಬೆದಾರ್, ಇಂದಿರಾ,ಪುಷ್ಪಾವತಿ, ಸಂತೋಷ ರಾಯಿ ಬೆಟ್ಟು, ಪ್ರಭಾಕರ ಶೆಟ್ಟಿ ವಾಮದಪದವು, ಪುರುಷೋತ್ತಮ ಅಂಚನ್ ಮತ್ತಿತರರು ಇದ್ದರು. ಎಪಿಎಂಸಿ ಸದಸ್ಯ ವಸಂತ ಕುಮಾರ್ ಅಣ್ಣಳಿಕೆ ಸ್ವಾಗತಿಸಿ, ವಂದಿಸಿದರು.

By suddi9

Leave a Reply

Your email address will not be published. Required fields are marked *