ಬಂಟ್ವಾಳ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಳ್ಳಿಗೆ, ನೆತ್ತರಕೆರೆ ಶಾಲೆಗೆ ” ವಿದ್ಯಾಗಮ” ಕಾರ್ಯಕ್ರಮದ ಅಂಗವಾಗಿ ರೋಟರಿ ಕ್ಲಬ್ ಬಂಟ್ವಾಳ ಟೌನ್ ವತಿಯಿಂದ ಶಾಲಾ ಮಕ್ಕಳಿಗೆ ಪುಸ್ತಕ ಮತ್ತು ಬ್ಲಾಕ್ ಬೋರ್ಡ್, ಜೊತೆಗೆ ಲೇಖನಿ ಸಾಮಗ್ರಿಗಳನ್ನು ವಿತರಿಸಲಾಯಿತು. ಬೆಂಜನಪದವು ರಾಮನಗರದಲ್ಲಿರುವ ಗಣಪತಿ ಕಟ್ಟೆ ಎಂಬಲ್ಲಿ ಖಜಾಂಚಿ ಜ್ಯೋತಿಂದ್ರ ಶೆಟ್ಟಿ ನೇತೃತ್ವದಲ್ಲಿ ಸಾಮಾಗ್ರಿಗಳನ್ನು ವಿತರಿಸಲಾಯಿತು. 
ಈ ಸಂದರ್ಭದಲ್ಲಿ ಕ್ಲಬ್ ನ ಅಧ್ಯಕ್ಷ ರೊ. ಪದ್ಮನಾಭ ರೈ ಕೊರೊನದಂತಹ ಕ್ಲಿಷ್ಟ ಪರಿಸ್ಥಿಯ ಬಗ್ಗೆ ಮಕ್ಕಳು ಯಾವ ರೀತಿಯಲ್ಲಿ ಜಾಗ್ರತೆ ವಹಿಸಬೇಕೆಂಬುದನ್ನು ವಿವರಿಸಿದರು, ಮುಖ್ಯ ಶಿಕ್ಷಕಿ ಗುಣರತ್ನ ಸ್ವಾಗತಿಸಿದರು, ಸಹಶಿಕ್ಷಕಿ ಮೋಹಿನಿ ವಂದಿಸಿದರು, ಗೌರವ ಶಿಕ್ಷಕಿ ಸುಮಲತಾ, ರೋಟೋರಿಯನ್ಸ್ ಕಾರ್ಯದರ್ಶಿ ಕಿಶೋರ್, ಚಿತ್ತರಂಜನ್ ಶೆಟ್ಟಿ, ದಯಾನಂದ ಶೆಟ್ಟಿ, ದಿವಾಕರ ಶೆಟ್ಟಿ ಉಪಸ್ತಿತಿದ್ದರು.
