ಬಂಟ್ವಾಳ: ರೋಟರಿ ಕ್ಲಬ್ ಬಂಟ್ವಾಳ ಟೌನ್ ಮತ್ತು ಚೌಟ ಗ್ಯಾಸ್ ಏಜನ್ಸಿ ಫರಂಗಿಪೇಟೆ ಇದರ ಮಾಲಕರು, ರೋಟರಿ ಕ್ಲಬ್ ಬಂಟ್ವಾಳ ಟೌನ್ ಉಪಾಧ್ಯಕ್ಷ ರೊ. ಜಗನ್ನಾಥ ಚೌಟ ಇವರ ನೇತೃತ್ವದಲ್ಲಿ ವಿಕಲಚೇತನ ಕುಟುಂಬದ ಸದಸ್ಯರಿಗೆ ಉಚಿತ ಗ್ಯಾಸ್ ವಿತರಿಸಲಾಯಿತು .
ಫಲಾನುಭವಿ ಬಂಟ್ವಾಳ ತಾಲೂಕಿನ ಬೋಳಂಗಡಿ ನಿವಾಸಿ ಗಂಗಾಧರ ಪೂಜಾರಿ ಎಂಬವರ ಮನೆಗೆ ತೆರಳಿ ಗ್ಯಾಸ್ ಮತ್ತು ಸ್ಟವ್ ವನ್ನು ಅಧ್ಯಕ್ಷರಾದ ಪದ್ಮನಾಭ ರೈ ಯವರು ಹಸ್ತಾಂತರಿಸಿದರು ಈ ಸಂದರ್ಭದಲ್ಲಿ ರೋಟೋರಿಯನ್ಸ್ ಕಾರ್ಯದರ್ಶಿ ಕಿಶೋರ್, ಸವಿತಾ ಚಿತ್ತರಂಜನ್ ಶೆಟ್ಟಿ, ಚಿತ್ತರಂಜನ್ ಶೆಟ್ಟಿ, ಸುಜಾತ ಪಿ ರೈ, ಸುಂದರ್ ಬಂಗೇರ, ಕೇಶವ ನಾಯ್ಕ್, ಆಲ್ಬರ್ಟ್ ಮೆನೆಜಸ್, ಗಣೇಶ್ ಶೆಟ್ಟಿ, ದಯಾನಂದ ಶೆಟ್ಟಿ, ದಿವಾಕರ ಶೆಟ್ಟಿ ಮಾದಲಾದವರಿದ್ದರು.

