ಬಂಟ್ವಾಳ: ಅಭಿವೃದ್ಧಿ ಕಾಮಗಾರಿಯ ವಿಚಾರದಲ್ಲಿ ಶಾಸಕರ ಬೇಡಿಕೆಗೆ  ತಕ್ಷಣ  ಸ್ಪಂದಿಸಿ ಅನುದಾನ ಮಂಜೂರುಗೊಳಿಸುವ ಮುಖ್ಯಮಂತ್ರಿ ಯಡಿಯೂರಪ್ಪರವರು ರಾಜ್ಯದ ಪಾಲಿಗೆ       “ಕಾಮಧೇನು ” ಇದ್ದಂತೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್,ಉಳಿಪಾಡಿ ಅವರು ಹೇಳಿದ್ದಾರೆ. ಬಂಟ್ವಾಳ ಮಂಡಲ ಬಿ.ಜೆ.ಪಿ.ವತಿಯಿಂದ ಕೊಯಿಲ ಗ್ರಾಮದ ಪಿಲ್ಕಾಜೆಗುತ್ತು ಎಂಬಲ್ಲಿ ನಡೆದ ಸಂಗಬೆಟ್ಟು ಮಹಾಶಕ್ತಿ ಕೇಂದ್ರದ ರಾಯಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಿ.ಜೆ.ಪಿ.ಕುಟುಂಬ ಮಿಲನ ಕಾರ್ಯಕ್ರಮ ದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಅವರು  ಮಾತಾನಾಡುತ್ತಿದ್ದರು.IMG-20201009-WA0036

ಗ್ರಾಮೀಣಾಭಿವೃದ್ಧಿ ಕಾಮಗಾರಿ, ಮುಖ್ಯಮಂತ್ರಿ ಪರಿಹಾರ ನಿಧಿ ,ಅಣೆಕಟ್ಟು ಕಾಮಗಾರಿ, ಸಂಪರ್ಕ  ರಸ್ತೆ ಮತ್ತು ಸೇತುವೆ, ಸೇರಿದಂತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕರು ಮಾಡುವ ಪ್ರತಿಯೊಂದು ಮನವಿಗೆ ಕೋಟ್ಯಾಂತರ ಅನುದಾನವನ್ನು ಬಿಡುಗಡೆಗೊಳಿಸಿ ನವ- ಕರ್ನಾಟಕ ನಿರ್ಮಾಣದತ್ತ  ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ವೈ ಅವರು ಹೆಜ್ಜೆ ಇಡುತ್ತಿದ್ದಾರೆ  ಎಂದು
ಅವರು ಹೇಳಿದರು. ಗ್ರಾಮ ಪಂಚಾಯತ್ ಅನುದಾನ ಹೆಚ್ಚಳ,ಉಚಿತ ಗ್ಯಾಸ್ ಸಂಪರ್ಕ ,ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್  ಸೇರಿದಂತೆ ಹಲವಾರು ಯೋಜನೆಗಳಿಗೆ ಕೇಂದ್ರ ಸರ್ಕಾರದಿಂದ ಕೋಟ್ಯಾಂತರ ರೂ. ಅನುದಾನ ಬಿಡುಗಡೆಯಾಗುತ್ತಿದೆ.ಇದು  ದೇಶದ ನಾಯಕತ್ವದ ಬದಲಾವಣೆಯಿಂದ,ಮಾತ್ರ ಸಾದ್ಯವಾಗಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಆಡಳಿತ ವಿರುವ  ಗ್ರಾಮ ಪಂಚಾಯತ್ ಗಳ ನಾಯಕತ್ವದ ಬದಲಾವಣೆಗೆ ಕಾರ್ಯಕರ್ತರು ಸಿದ್ದರಾಗಬೇಕು ಎಂದರು.

ಭಾರತೀಯ ಜನತಾ ಪಕ್ಷ ಪ್ರಪಂಚದಲ್ಲಿ ಅತ್ಯಂತ ಹೆಚ್ಚು ಸದಸ್ಯರು ಹೊಂದಿರುವ ಎಕೈಕ ರಾಜಕೀಯ ಪಕ್ಷವಾಗಿ ಹೊರ ಹೊಮ್ಮಿದ್ದು  ಹೆಮ್ಮೆಯ ವಿಷಯವಾಗಿದೆ. ಬಿ.ಜೆ.ಪಿ.ಯಲ್ಲಿ ಸಾಮಾನ್ಯ ಕಾರ್ಯಕರ್ತರು ಕೂಡ ಅತ್ಯುನ್ನತ ಹುದ್ದೆಗೆ ಹೋಗಬಲ್ಲರು ಎಂಬುದಕ್ಕೆನಮ್ಮ ರಾಷ್ತ್ರಪತಿ ರಮಾನಾಥ ಕೋವಿಂದ್,ಪ್ರಧಾನಿ ನರೇಂದ್ರ ಮೋದಿಜೀ,ನಮ್ಮವರೇ ಆದ ಸಂಸದ ನಳಿನ್ ಕುಮಾರ್ ಕಟೀಲ್ ಪ್ರಮುಖ ಸಾಕ್ಷಿ ಯಾಗಿದ್ದಾರೆ.ಈ ಎಲ್ಲಾದಕ್ಕೂ ಮೂಲ ಪ್ರೇರಣೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಿಕ್ಷಣವೇ ಸ್ಪೂರ್ತಿಯಾಗಿದೆ ಎಂದರು. ಗ್ರಾಮ ಪಂಚಾಯತ್ ಚುನಾವಣಾ ಬಂಟ್ವಾಳ ಮಂಡಲ ಪ್ರಭಾರಿ ದೇವದಾಸ್ ಶೆಟ್ಟಿ  ಕೇಂದ್ರ ಮತ್ತು ರಾಜ್ಯದ ವಿವಿಧ ಯೋಜನೆ ಮತ್ತು ಬಿಡುಗಡೆ ಗೊಂಡ ಅನುದಾನ ಬಗ್ಗೆ ಮಾಹಿತಿ ನೀಡಿದರು.

ಬಂಟ್ವಾಳ ಮಂಡಲ ಬಿ.ಜೆ.ಪಿ.ಅಧ್ಯಕ್ಷ ದೇವಪ್ಪ ಪೂಜಾರಿ  ಅಧ್ಯಕ್ಷತೆ ವಹಿಸಿ ಮಾತಾನಾಡಿ ಗ್ರಾಮಾಂತರ ಪ್ರದೇಶಗಳಲ್ಲಿ ಬಿ.ಜೆ.ಪಿ.ಪರವಾದ ವಾತಾವರಣ ಸೃಷ್ಟಿ ಯಾಗುತ್ತಿದ್ದು ಕಾರ್ಯಕರ್ತರು ಮತ ಪರಿವರ್ತನೆ ಮಾಡುವ ಮೂಲಕ ಶ್ರಮವಹಿಸಬೇಕಾಗಿದೆ ಎಂದರು.ಹಿರಿಯ ಬಿ.ಜೆ.ಪಿ.ಕಾರ್ಯಕರ್ತ ಕೊರಗಪ್ಪ ಅಂಚನ್ ಪಿಲ್ಕಾಜೆಗುತ್ತು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ವೇದಿಕೆಯಲ್ಲಿ ಬಂಟ್ವಾಳ ಮಂಡಲ ಬಿ.ಜೆ.ಪಿ.ಪ್ರಧಾನ ಕಾರ್ಯದರ್ಶಿ ಡೊಂಬಯ ಅರಳ,ಬಂಟ್ವಾಳ ಗ್ರಾಮ ಪಂಚಾಯತ್ ಚುನಾವಣಾ ಸಹ ಪ್ರಭಾರಿ ಪ್ರಭಾಕರ ಪ್ರಭು,ಸಂಗಬೆಟ್ಟು ಮಹಾಶಕ್ತಿ ಕೇಂದ್ರ ಅಧ್ಯಕ್ಷ ಸೀತರಾಮ ಪೂಜಾರಿ, ಪಕ್ಷದ ಮಂಡಲ ಉಪಾದ್ಯಕ್ಷ ಚಿದಾನಂದ ರೈ,ಪ್ರಮುಖರಾದ ಪುರುಷೋತ್ತಮ ಶೆಟ್ಟಿ, ಶೇಖರ್ ಪೂಜಾರಿ ಪಿಲ್ಕಾಜೆ,ಹರೀಶ್ ಆಚಾರ್ಯ,ಪರಮೇಶ್ವರ ಪೂಜಾರಿ, ಮಾಧವ ಬಂಗೇರ, ರಾಘವ ಅಮೀನ್ ,ರತ್ನಕುಮಾರ್ ಚೌಟ, ದಿನೇಶ್ ಶೆಟ್ಟಿ ದಂಬೆದಾರ್,ಇಂದಿರಾ,ಪುಷ್ಪ, ಸಂತೋಷ ರಾಯಿಬೆಟ್ಟು,ಪ್ರಭಾಕರ ಶೆಟ್ಟಿ ವಾಮದಪದವು,ದಯಾನಂದ ಸಪಲ್ಯ,ಪುರುಷೋತ್ತಮ ಅಂಚನ್,ಉಪಸ್ಥಿತರಿದ್ದರು.ತಾಪಂ ಮಾಜಿ ಸದಸ್ಯ ವಸಂತ ಅಣ್ಣಳಿಕೆ  ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *