ಬಂಟ್ವಾಳ: ಬಂಟ್ವಾಳ ವಿಧಾನಸಭಾ ಕ್ಷೇತ್ರದ 83 ಫಲಾನುಭವಿಗಳಿಗೆ ಗುರುವಾರ ಬಿ.ಸಿ.ರೋಡಿನಲ್ಲಿರುವ ಬಂಟ್ವಾಳ ಶಾಸಕರ ಕಚೇರಿಯಲ್ಲಿ 94 ಸಿ ಹಕ್ಕುಪತ್ರವನ್ನು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು  ವಿತರಿಸಿದರು. IMG-20201008-WA0005

ಬಳಿಕ ಮಾತನಾಡಿದ ಶಾಸಕರು  ಬಂಟ್ವಾಳ ಕ್ಷೇತ್ರದಲ್ಲಿ ನಿರಂತರವಾಗಿ ಹಕ್ಕುಪತ್ರ ವಿತರಿಸಲಾಗುತ್ತಿದ್ದು, ಈಗಾಗಲೇ 95 ಶೇ.ವಿತರಣೆಯಾಗಿದೆ. ಮನೆ ಇದ್ದರೂ ಹಕ್ಕು ಪತ್ರ ಇಲ್ಲದಿದ್ದಾಗ ಸರಕಾರಿ ಸವಬಲಭ್ಯ,ಬ್ಯಾಂಕ್ ಸಾಲ ಪಡೆಯಲು ಸಾಧ್ಯವಾಗುತ್ತಿಲ್ಲ,ಹಕ್ಕುಪತ್ರ ಸಿಕ್ಕಿದಾಗ ದಾಖಲೆಯ ಜತೆ ಸೌಲಭ್ಯವನ್ನು ಪಡೆಯಬಹುದಾಗಿದೆ ಎಂದರು.

ಈ ಸಂದರ್ಭದಲ್ಲಿ ತಾ.ಪಂ ಸದಸ್ಯರಾದ ಪ್ರಭಾಕರ್ ಪ್ರಭು,ಯಶವಂತ ಪೊಳಲಿ , ಕಂದಾಯ ನಿರೀಕ್ಷಕ ನವೀನ್ ಬೆಂಜನಪದವು,ದಿವಾಕರಮುಗುಳಿಯ,ಗ್ರಾಮಕರಣಿಕರಾದ ಜನಾರ್ದನ ಜೆ,ರಾಜು,ಪ್ರಶಾಂತ್,ಕರಿಬಸಪ್ಪ,ವೈಶಾಲಿ,ಶಿಲ್ಪಾ,ಅನಿಲ್,ಆಶಾ,ಲಿಂಗಪ್ಪಜುಜಾರಿ ಮೊದಲಾದವರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *