ಬಂಟ್ವಾಳ: ತಾಲೂಕು ಕೃಷಿ ಇಲಾಖೆಯಿಂದ ೫೦ ಶೇ. ಸಹಾಯಧನದಲ್ಲಿ ರೈತರಿಗೆ ನೀಡಲ್ಪಟ್ಟ ಪವರ್ ಟಿಲ್ಲರ್ ಗಳನ್ನು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಗುರುವಾರ ಬಿ.ಸಿ.ರೋಡಿನಲ್ಲಿರುವ ಕೃಷಿ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿ ಆವರಣದಲ್ಲಿ ಫಲಾನುಭವಿಗಳಿಗೆ ಹಸ್ತಾಂತರಿಸಿದರು.

ಫಲಾನುಭವಿಗಳಾದ ಜಿ.ವಿಷ್ಣುಮೂರ್ತಿ ಭಟ್ ಬಡಗಬೆಳ್ಳೂರು ಹಾಗೂ ದುಲ್ಸಿನ್ ಡಿಸೋಜ ಅವರು ಶಾಸಕರಿಂದ ಪವರ್ ಟಿಲ್ಲರ್ ಪಡೆದರು. ಬಂಟ್ವಾಳ ಸಹಾಯಕ ಕೃಷಿ ನಿರ್ದೇಶಕ ನಾರಾಯಣ ಶೆಟ್ಟಿ ಹಾಗೂ ಸಿಬಂದಿಗಳು ಉಪಸ್ಥಿತರಿದ್ದರು.
