ಮೂಡಬಿದ್ರೆ: ಮೂಡಬಿದ್ರೆ ಸವಿತಾ ಸಮಾಜದ ವಾರ್ಷಿಕ ಮಹಾಸಭೆ ಮಂಗಳವಾರ ನಡೆಯಿತು. ಜಿಲ್ಲಾಧ್ಯಕ್ಷ ಆನಂದ ಬಂಡಾರಿ ಮತ್ತು ವಸಂತ್ ಬೆಳ್ಳೂರು ಬೆಳಗಿಸಿ ಉದ್ಘಾಟಿಸಿದರು. ಮೂಡಬಿದ್ರೆ ಸವಿತಾ ಸಮಾಜದ ಅಧ್ಯಕ್ಷ ವಿನಯ ಬಂಡಾರಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆಯಿತು. ಮೂಡಬಿದ್ರೆ ಸವಿತಾ ಸಮಾಜದ ಕಾರ್ಯದರ್ಶಿ ಸಂತೋಷ್ ಕುಮಾರ್ ಜೊತೆ ಕಾರ್ಯದರ್ಶಿ ಸತೀಶ್ ಭಂಡಾರಿ ಕೋಶಾಧಿಕಾರಿ ಅಶೋಕ ಬಂಡಾರಿ ಉಪಾಧ್ಯಕ್ಷ ಸಂಜೀವ ಸಾಲ್ಯಾನ್ ಮತ್ತು ಗೌರವಧ್ಯಕ್ಷ ಜಯ ಬಂಡಾರಿ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.
