ಮೂಡಬಿದಿರೆ: ಮೂಡಬಿದ್ರೆ ಕಳೆದ ಹಲವು ವರ್ಷಗಳ ಬೇಡಿಕೆಯಾಗಿರುವ ಸಮಾನ ಕೆಲಸಕ್ಕೆ ಸಮಾನ ವೇತನ ಸೇವಾಭದ್ರತೆ ಅರ್ ಪಾಲೀಸಿ ಮುಂತಾದ 14 ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಂಬಂಧ ಪಟ್ಟ ಇಲಾಖೆ ಹಾಗೂ ಸರಕಾರ ಈ ಬಗ್ಗೆ ಗಮನಹರಿಸಬೇಕೆಂದು ಮೂಡಬಿದ್ರೆ ವಲಯದ ಸಂಚಾಲಕರಾದ ವೆಂಕಟಕೃಷ್ಣ ಭಟ್ ಆಗ್ರಹಿಸಿದರು.
ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಹಾಗೂ ಹೊರಗುತ್ತಿಗೆ ನೌಕರರ ಸಂಘ (ರಿ.) ಮೂಡಬಿದ್ರೆ ವಲಯ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘ ಭಾರತೀಯ ಮಜ್ದೂರ್ ಸಂಘದೊಂದಿಗೆ ಸಂಯೋಜಿತ ಬಿ.ಎಂ.ಎಸ್ 12ನೇ ದಿನದಿಂದ ಮೂಡಬಿದಿರೆಯ ತಹಸೀಲ್ದಾರ್ ಕಛೇರಿ ಎದುರು ಅನಿರ್ದಿಷ್ಟಾವದಿ ಮುಷ್ಕರ ಸೋಮವಾರ ನಡೆಯಿತು. ಈ ಸಂದರ್ಭದಲ್ಲಿ ಮೂಡಬಿದ್ರೆ ವಲಯದ ಸಂಘ ದ ಪದಾಧಿಕಾರಿಗಳು ಉಪಸ್ಥಿತರಿದ್ದರು.
