ಸುದ್ದಿ9 ಬಂಟ್ವಾಳ: ಬಂಟ್ವಾಳ ತಾಲೂಕಿನ ಮೆಲ್ಕರ್ ಬೋಳಂಗಡಿ ಉಧ್ಯಮಿ ಯೊಬ್ಬರ ಮನೆಯಿಂದ ಚಿನ್ನಾಭರಣ ಹಾಗೂ ನಗದು ಹಣ ಕಳ್ಳತನ ಅ.12ರಂದು ಭಾನುವಾರ ಮುಂಜಾನೆ ಕಳವುಗೈದ ಪ್ರಕರಣ ಬೆಳಕಿಗೆ ಬಂದಿದೆ.
ಬೋಳಂಗಡಿ ನಿವಾಸಿ ಪಿಬಿಎ.ಅರ್ಥ ಮೂವರ್ಸ್ ನ ಮಾಲಕರಾದ ಅಝೀಂ ಅವರು ಭಾನುವಾರ ಮುಂಜಾನೆ 5ಗಂಟೆಯ ಸಮಯದಲ್ಲಿ ವಾಕಿಂಗ್ ಹೋಗುವ ಸಮಯ ನೋಡಿ ಕಳ್ಳರು ಹಿಂದಿನ ಬಾಗಿಲಿನ ಚಿಲಕ ಮುರಿದು ಒಳಹೊಕ್ಕ ಅವರು 5ಪವನ್ ಒಡವೆ ಹಾಗೂ 8 ಸಾವಿರ ನಗದು ಹಣ ದೋಚಿ ಎದುರಿನ ಬಾಗಿಲಿನಿಂದಲೇ ಪರಾರಿಯಾಗಿಉದ್ದಾರೆ.
ಸುಮಾರ್ 5ರಿಂದ 7ಗಂಟೆಯ ಒಳಗಡೆ ಅಂದರೆ 2ತಾಸಿನ ಅಂತರದಲ್ಲಿ ಕಳ್ಳತನ ನಡೆದಿದೆ ಅಝೀಂ ಅವರು ಒಬ್ಬರೆ ಮನೆಯಲ್ಲಿ ಇದ್ದು ಹೆಂಡತಿ ಮತ್ತು ಮಕ್ಕಳು ಅವರ ತಾಯಿ ಮನೆಗೆ ಹೋಗಿದ್ದರು. ಯಾರೋ ಗೊತ್ತದ್ದವರೆ ಕಳ್ಳತನ ಮಾಡಿರಬಹುದೆಂದು ಸಂಕಿಸಲಾಗಿದೆ. ಬಂಟ್ವಾಳ ಠಾಣೆಯ ಬೆಳ್ಳಿಯಪ್ಪ ಹಾಗೂ ನಂದಕುಮಾರ್ ಶ್ವಾನದಳವನ್ನು ಕರೆಸಿ ತನಿಕೆ ನಡೆಸುತ್ತಿದ್ದಾರೆ.



