ಹೃದಯದ ಬಾಗಿಲು ತೆರೆಯಲು ಬರುತ್ತಿದ್ದಾಳೆ ಎನ್ನಸಖಿ
ಸ್ಫೂರ್ತಿದಾಯಕವಾದ ಮಾತುಗಳು,ತುಳುನಾಡ ಕುರಿತಾಗಿ ವಿಡಿಯೋಗಳನ್ನು ರಚಿಸುತ್ತಿದ್ದ ಫಲ್ಗುಣಿ ಕ್ರಿಯೇಷನ್ಸ್ ನಾರಾವಿ ತಂಡ ಇದೀಗ ಎನ್ನಸಖಿ ತುಳು ಆಲ್ಬಂ ಸಾಂಗ್ ಅನ್ನು ನಿರ್ಮಾಣ ಮಾಡಿ ಹೊಸ ಪ್ರಯತ್ನವನ್ನು ಬಿಡುಗಡೆ ಮಾಡಲು ತಯಾರಾಗಿ ನಿಂತಿದೆ.
ಕನರಾಜ್ಯದ ಮಹಾರಾಣಿಯ ಬಗೆಗೆ ಇರುವ ಫಲ್ಗುಣಿ ಕ್ರಿಯೇಷನ್ಸ್ ನಾರಾವಿ ತಂಡದ ಈ ಆಲ್ಬಂ ಸಾಂಗ್ ಇದೇ ಅಕ್ಟೋಬರ್ 5ರಂದು ಸೋಮವಾರ ಬಿಡುಗಡೆಗೊಳ್ಳಲಿದೆ .ಈ ತುಳು ಆಲ್ಬಂ ಸಾಂಗ್ ಅನ್ನು ಗೆಜ್ಜೆಗಿರಿ ನಂದನ ಬಿತ್ತಿಲು,ಪಂಚಮುಖಿ ಆಂಜನೇಯ ಕ್ಷೇತ್ರ ಹನುಮಗಿರಿ ಹಾಗೂ ನೆಲ್ಲಿಕಾರಿನ ಪರಿಸರದಲ್ಲಿ ಸುನಿಲ್ ಕುಮಾರ್ ಕ್ರಿಯೇಟಿವ್ ಪಿಕ್ಸೆಲ್ ಇವರು ಚಿತ್ರೀಕರಿಸಿದ್ದಾರೆ .
ಎನ್ನಸಖಿಯ ಸಾಹಿತ್ಯವನ್ನು ಶಿವು ನಾರಾವಿಯವರು ಬರೆದಿದ್ದು,ಗಣೇಶ್ ಹೆಗ್ಡೆ ನಾರಾವಿಯವರು ಸುಂದರವಾಗಿ ಹಾಡಿದ್ದಾರೆ .ಈ ಆಲ್ಬಂ ಸಾಂಗ್ ನಲ್ಲಿ ಹೊಸ ಕಲಾವಿದರಾದ ದೀಪು ನಾರಾವಿ ಹಾಗೂ ತನ್ನ ಡಾನ್ಸ್ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಖ್ಯಾತಿಯನ್ನು ಪಡೆದಿರುವ ಅಂಕಿತ ಶೆಟ್ಟಿ ಬಜಗೋಳಿ ಇವರು ನಟಿಸಿರುವರು .
ನಿಮಿತ್ತ್ ಜೈನ್ ಕೊಕ್ರಾಡಿಯವರು ಸಂಪೂರ್ಣ ನಿರ್ವಹಣೆಯನ್ನು ಮಾಡಿದ್ದು ,ದೀಕ್ಷಿತ್ ವಗ್ಗ ನಿರ್ದೇಶಿಸಿ ಸುನಿಲ್ ಸಂಕಲನಗೈದಿದ್ದಾರೆ .ಶಿವು ನಾರಾವಿಯವರ ಕಲ್ಪನೆಯಲ್ಲಿ ಮೂಡಿಬಂದಿರುವ ಎನ್ನಸಖಿ ತುಳು ಆಲ್ಬಂ ಸಾಂಗ್ ಗೆ ಬಿಡುಗಡೆಗೂ ಮೊದಲು ಕೋಸ್ಟಲ್ ವುಡ್ ನಟ ನಟಿಯರಿಂದ ಮೆಚ್ಚುಗೆ ವ್ಯಕ್ತವಾಗಿರುವುದರಿಂದ ಎಲ್ಲರೂ “ಎನ್ನಸಖಿ”ಯ ನಿರೀಕ್ಷೆಯಲ್ಲಿದ್ದಾರೆ.
*ದೀಪಕ್ ಕಾಮತ್ ಎಳ್ಳಾರೆ