ಉಡುಪಿ: ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ಇವರ ಎರಡನೇ ಹಂತದ ಯೋಜನೆ, ‘ವಿದ್ಯುತ್ ಚಾಲಿತ ಸಂಚಾರಿ ಶೀತಲಿಕೃತ ಶವರಕ್ಷಣಾ ಯಂತ್ರದ ಲೋಕಾರ್ಪಣೆ, ಹಾಗೂ ಯಂತ್ರ ಭದ್ರತಾ ಕುಟೀರದ ಉದ್ಘಾಟನೆ’ ಕಾರ್ಯಕ್ರಮವು ಅ.5, ಸೋಮವಾರ, 80 ಬಡಗುಬೆಟ್ಟು- ಶಾಂತಿನಗರ ಇಲ್ಲಿಯ ”ನಿಮ್ಮಮನೆ” ಆಶ್ರಯದಲ್ಲಿ ಬೆಳಿಗ್ಗೆ 10-30 ಕ್ಕೆ ಅತಿಥಿ ಗಣ್ಯರ ಉಪಸ್ಥಿತಿಯಲ್ಲಿ ನಡೆಯಲಿದೆ ಎಂದು, ನಾಗರಿಕ ಸಮಿತಿಯ ಪ್ರಧಾನ ಸಂಚಾಲಕ ನಿತ್ಯಾನಂದ ಒಳಕಾಡು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಳೆದ ಮೂರು ವರ್ಷಗಳಿಂದ ನಾಗರಿಕ ಸಮಿತಿಯಿಂದ ಎರಡು ಶವ ರಕ್ಷಣಾ ಯಂತ್ರಗಳು ಉಡುಪಿ, ಬ್ರಹ್ಮಾವರ, ಕಾಪು ತಾಲೂಕುಗಳಲ್ಲಿ ಉಚಿತವಾಗಿ ಒದಗಿಸಲಾಗುತ್ತಿದೆ. ಬೇಡಿಕೆ ಹೆಚ್ಚಾದ ಕಾರಣ ಮಣಿಪಾಲ ಕೇಂದ್ರವಾಗಿಟ್ಟುಕೊಂಡು ಹೊಸ ಯಂತ್ರವನ್ನು ಇಡಲಾಗಿದೆ. ಈ ಯಂತ್ರವನ್ನು ಮಣಿಪಾಲ, ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅವಶ್ಯಕತೆ ಇರುವವರು ಉಚಿತವಾಗಿ ಬಳಸಬಹುದಾಗಿದೆ. ಸಾಗಟದ ವೆಚ್ಚವನ್ನಷ್ಟೆ ಬಳಕೆದಾರರು ಭರಿಸಬೇಕಾಗುತ್ತದೆ. ಬಳೆಕೆಯಾದ ಬಳಿಕ ಯಂತ್ರವನ್ನು ಯಥಾರೂಪದಲ್ಲಿ ಸಮಿತಿಯ ಯಂತ್ರ ಭದ್ರತಾ ಕುಟೀರಕ್ಕೆ ಹಿಂತಿರುಗಿಸಬೇಕೆಂದು ನಾಗರಿಕ ಸಮಿತಿಯ ಪ್ರಧಾನ ಸಂಚಾಲಕ ನಿತ್ಯಾನಂದ ಒಳಕಾಡು ಅವರು ಯೋಜನೆಯ ವಿವರ ನೀಡಿದರು.
