
ಸ್ವಚ್ಛ ಭಾರತ್ ಫ್ರೆಂಡ್ಸ್ ಇದರ ಜಿಲ್ಲಾ ಸಂಯೋಜಕರಾದ ರಾಘವೇಂದ್ರ ಪ್ರಭು ಕರ್ವಾಲು ಮಾತನಾಡುತ್ತಾ, ಸ್ವಚ್ಚತೆ ಎಂಬುದು ನಮ್ಮ ಮನೆಯಿಂದ ಪ್ರಾರಂಭವಾಗಬೇಕು. ಪ್ರತಿ ಪ್ರಜೆಯೂ ಸ್ವಯಂಪ್ರೇರಿತನಾಗಿ ತನ್ನ ಸಮಾಜವನ್ನು ಶುಚಿಯಾಗಿಟ್ಟುಕೊಂಡರೆ ಸಂಘಟನೆಗಳ ಕೆಲಸ ಕಡಿಮೆಯಾಗುತ್ತದೆ. ಪ್ರತಿಯೊಬ್ಬರೂ ಸ್ವಚ್ಛ ಸಮಾಜದ ನಿರ್ಮಾಣಕ್ಕೆ ಕ್ರಿಯಾಶೀಲ ಪ್ರಯತ್ನಗಳನ್ನು ನಡೆಸಬೇಕು. ನಾವು ಬದಲಾದರೆ ಮಾತ್ರ ದೇಶ ಬದಲಾಗುವುದು ಎಂದರು.
ಶಾಲಾ ಅಧ್ಯಾಪಕಿ ವಿನಯ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿಯವರು ಮಾತನಾಡಿ ಅವರ ಜೀವನದ ತತ್ವಾದರ್ಶಗಳು ನಮ್ಮನ್ನು ನಿರಂತರವಾಗಿ ಪ್ರೇರಣೆ ನೀಡುವ ಮೂಲಕ ಬಲಿಷ್ಠ ಸಮಾಜ ನಿರ್ಮಾಣ ಪರಿಕಲ್ಪನೆಯನ್ನು ಸಾಕಾರಗೊಳಿಸುತ್ತದೆ ಎಂದರು
ತಾಲೂಕು ಪಂಚಾಯತ್ ಸದಸ್ಯರಾದ ಸುಲೋಚನಾ, ನಿರ್ಮಲ ತೋನ್ಸೆ, ಹೂಡೆ ಇದರ ಅಧ್ಯಕ್ಷರಾದ ವೆಂಕಟೇಶ್ ಕುಂದರ್, ಸೌಹಾರ್ದ ಸಮಿತಿ, ಕೆಮ್ಮಣ್ಣು ಇದರ ಅಧ್ಯಕ್ಷರಾದ ಜ್ಯೋತಿ ಲೂವಿಸ್, ಲಯನ್ಸ್ ಕ್ಲಬ್ ಕಲ್ಯಾಣಪುರ ಇದರ ಅಧ್ಯಕ್ಷರಾದ ರೊನಾಲ್ಡ್ ಸುವಾರಿಸ್, ರೋಟರಿ ಕ್ಲಬ್ ಕಲ್ಯಾಣಪುರ ಇದರ ಅಧ್ಯಕ್ಷರಾದ ಡೆಸ್ಮಂಡ್ ವಾಸ್, ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸ್ವಸಹಾಯ ಸಂಘಗಳ ಒಕ್ಕೂಟ ಕೆಮ್ಮಣ್ಣು ಇದರ ಅಧ್ಯಕ್ಷರಾದ ಸಂಜೀವ ಪೂಜಾರಿ, ರಿಕ್ಷಾ ಚಾಲಕರು ಮತ್ತು ಮಾಲಕರು ಹಂಪನಕಟ್ಟೆ ಇದರ ಅಧ್ಯಕ್ಷರಾದ ಶೈಲೇಶ್ ಸುವರ್ಣ, ಫುಟ್ಬಾಲ್ ಫ್ರೆಂಡ್ಸ್ ಕೆಮ್ಮಣ್ಣು ಅಧ್ಯಕ್ಷರಾದ ಹಮೀದ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ತಾರಾನಾಥ್ ಉಪಸ್ಥಿತರಿದ್ದರು.
ಶಾಲಾ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ನಂದಕಿಶೋರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಂಶುಪಾಲರಾದ ಗ್ಸೇವಿಯರ್ ರವರು ಸ್ವಾಗತಿಸಿ ಶಾಲಾ ಮುಖ್ಯೋಪಾಧ್ಯಾಯರಾದ ಬಿ. ಎಚ್. ಲಿಂಗರಾಜು ಧನ್ಯವಾದ ಸಮರ್ಪಿಸಿದರು. ಅಧ್ಯಾಪಕಿ ಉಜ್ವಲ ಕಾರ್ಯಕ್ರಮ ನಿರೂಪಿಸಿದರು.
