ಬಂಟ್ವಾಳ: ತಾಲೂಕಿನ ಮಂಚಿ ಗ್ರಾಮದ ಶಾಂತಿನಗರ-ಕಂಚಿಲ ರಸ್ತೆಯನ್ನು 25 ಲಕ್ಷ ರೂ.ವೆಚ್ಚದಲ್ಲಿ ಕಾಂಕ್ರೀಟಿಕರಣಗೊಳಿಸಿ ಅಭಿವೃದ್ಧಿ ಪಡಿಸಲು ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಶಿಲಾನ್ಯಾಸ ನೆರವೇರಿಸಿದರು.
ಈ ಸಂದರ್ಭದಲ್ಲಿ ಕೊಳ್ನಾಡು ಮಹಾಶಕ್ತಿಕೇಂದ್ರದ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ ಕರೋಪಾಡಿ,ಬಂಟ್ವಾಳ ಬಿಜೆಪಿ ಯುವ ಮೋರ್ಚಾ ಬಂಟ್ವಾಳದ ಕಾರ್ಯದರ್ಶಿ ಪ್ರಮೋದ್ ನೂಜಿಪ್ಪಾಡಿ, ಶಕ್ತಿಕೇಂದ್ರ ಪ್ರಮುಖರಾದ ರಮೇಶ್ ಪತ್ತುಮುಡಿ, ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಾಕ್ಷ ಮೋಹನದಾಸ್ ಶೆಟ್ಟಿ ಪುದ್ದೊಟ್ಟು, ಬೂತ್ ಸಮಿತಿ ಅಧ್ಯಕ್ಷ ಪ್ರಶಾಂತ್ ಕಂಚಿಲ, ಪ್ರಭಾಕರ ಶೆಟ್ಟಿ ನಾಡಾಜೆ, ದಿನೇಶ್ ಸಾಲ್ಯಾನ್ ಮೋಂತಿಮಾರು, ಪಂಚಾಯತ್ ನ ಮಾಜಿ ಸದಸ್ಯರಾದ ಪುಷ್ಪಾ ಎಸ್ ಕಾಮತ್, ಸುಮತಿ, ಕೃಷ್ಣಪ್ಪ ಬಂಗೇರ, ಕೇಶವ ರಾವ್ ನೂಜಿಪ್ಪಾಡಿ, ಬೂತ್ ಸಮಿತಿ ಕಾರ್ಯದರ್ಶಿ ರಾಜೇಶ್ ನೂಜಿಪ್ಪಾಡಿ ಉಪಸ್ಥಿತರಿದ್ದರು.
