ಬಂಟ್ವಾಳ:ಉತ್ತರ ಪ್ರದೇಶ ಸರಕಾರ ಸಂವಿಧಾನ, ಪ್ರಜಾಪ್ರಭುತ್ವಕ್ಕೆ ಬೆಲೆ ನೀಡದೆ, ಸರ್ವಾಧಿಕಾರಿ ಧೋರಣೆಯನ್ನು ತಳೆದಿದೆ.  ಹುನ್ನಾವುನಲ್ಲ ನಡೆದ ದಲಿತ ಯುವತಿಯನ್ನು  ಅತ್ಯಾಚಾರಗೈದು ಕೊಲೆ ಮಾಡಿರುವ ಕೃತ್ಯ  ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದ್ದು,ಈ ನಿಟ್ಟಿನಲ್ಲಿ ಉ.ಪ್ರ.ಸಿಎಂ ಯೋಗಿ ಅದಿತ್ಯನಾಥ್ ಸರಕಾರ ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸುವಂತೆ ದ.ಕ.ಜಿಲ್ಲಾ ಕಾಂಗ್ರೆಸ್ ಪ್ರ.ಕಾರ್ಯದರ್ಶಿ ಚಂದ್ರಶೇಖರ ಪೂಜಾರಿ ಒತ್ತಾಯಿಸಿದ್ದಾರೆ.95d916ea-fff5-48de-a5f6-b2609490bbc0

ಪೋಲಿಸರು ಕೂಡ ಈ ಕೃತ್ಯದಲ್ಲಿ ಸಂವಿಧಾನಕ್ಕೆ ವಿರುದ್ಧವಾಗಿ ವರ್ತಿಸುತ್ತಿದ್ದಾರೆ. ಭಾರತದ ಕಾನೂನಿಗೆ ಉತ್ತರ ಪ್ರದೇಶದಲ್ಲಿ ಯಾವುದೇ ಮೌಲ್ಯ ಇಲ್ಲದಂತಾಗಿದ್ದು, ಯೋಗಿ ರಾಜ್ಯದಲ್ಲಿ ಪೋಲಿಸರದ್ದೆ ದರ್ಬಾರ್ ನಡೆಯುತ್ತಿದೆ ಅವರು ಪ್ರಕಟಣೆಯಲ್ಲಿ ಅಪಾದಿಸಿದ್ದಾರೆ.

ಈ ನಿಟ್ಟಿನಲ್ಲಿ ಸಿಎಂ ಯೋಗಿ ಅದಿತ್ಯನಾಥ್ನೈತಿಕ ಹೊಣೆ ಹೊತ್ತು  ರಾಜೀನಾಮೆ ನೀಡಬೇಕು. ಇಲ್ಲವೇ ಸರಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಡಳಿತ ಜ್ಯಾರಿ ಮಾಡಬೇಕು ಎಂದು ಒತ್ತಾಯಿಸಿರುವ ಅವರು ಕೊಲೆಗೀಡಾದ ಯುವತಿಯ ಕುಟುಂಬಕ್ಕೆ ಸಾಂತ್ವಾನ ಹೇಳಲು ಬಂದಿರುವ ಕಾಂಗ್ರೆಸ್ ಪಕ್ಷದ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾಗಾಂಧಿಯವರನ್ನು ಬಂಧಿಸಿರುವುದನ್ನು  ಖಂಡಿಸಿದ್ದಾರೆ.

By suddi9

Leave a Reply

Your email address will not be published. Required fields are marked *