ಬಂಟ್ವಾಳ: ಕಾಂಗ್ರೇಸ್ ಎಂಬುದು ಕೊರೋನ ಇದ್ದಂತೆ,ಕೊರೋನ ಓಡಿಸಲು ವಾರಿಯರ್ಸ್ ರುಗಳು ಕೆಲಸ ನಿರ್ವಹಿಸಿದಂತೆ ಬಿಜೆಪಿ ಕಾರ್ಯಕರ್ತರು ಪ್ರತಿ ಬೂತಿನಿಂದ ಕಾಂಗ್ರೇಸನ್ನು ಓಡಿಸಲು ವಾರಿಯರ್ಸ್ ಗಳಾಗುವಂತೆ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ, ರಾಜ್ಯದ ಕಿಯೋನಿಕ್ಸ್ ನಿಗಮದ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಕರೆ ನೀಡಿದರು. ಬಿಸಿರೋಡಿನ ಹೋಟೇಲ್ ರಂಗೋಲಿಯ ಸಭಾಂಗಣದಲ್ಲಿ ಬಿಜೆಪಿ ಸಜಿಪಮುನ್ನೂರು ಮಹಾಶಕ್ತಿಕೇಂದ್ರದ ವತಿಯಿಂದ ಗ್ರಾಮಪಂಚಾಯತ್ ಚುನಾವಣೆಯ ಕುರಿತು ಪ್ರಮುಖರ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. 
ಸಭಾ ಅಧ್ಯಕ್ಷತೆ ವಹಿಸಿದ್ದ ಬಂಟ್ವಾಳ ಕ್ಷೇತ್ರ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿಯವರು ಮಾತಾನಾಡಿ ಬೂತ್ ಸಮಿತಿ ಸಕ್ರಿಯಗೊಂಡಾಗ ಗೆಲುವು ಸುಲಭಸಾದ್ಯ ಆಗುತ್ತದೆ ಎಂದರು.
ಬಂಟ್ವಾಳ ಕ್ಷೇತ್ರದ ಪಂಚಾಯತ್ ಚುನಾವಣೆಯ ಪ್ರಭಾರಿಗಳು, ಬೂಡಾದ ಅಧ್ಯಕ್ಷ ದೇವದಾಸ್ ಶೆಟ್ಟಿಯವರು ಮಾತನಾಡಿ,ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು, ಸಜಿಪಮುನ್ನೂರು ಮಹಾಶಕ್ತಿಕೇಂದ್ರ ವ್ಯಾಪ್ತಿಯಲ್ಲಿ ಸುಮಾರು 42 ಕೋಟಿ ರೂ. ಅನುದಾನವನ್ನು ಒದಗಿಸಿ ಗ್ರಾಮದ ಅಭಿವೃದ್ಧಿಗೆ ಸಹಕರಿಸಿದ್ದಾರೆ ಎಂದು ಮಾಹಿತಿ ನೀಡಿದರು. ಬಂಟ್ವಾಳ ಕ್ಷೇತ್ರದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಡೊಂಬಯ ಅರಳ ಅವರು ಪಕ್ಷದ ಸಲಹೆ ಸೂಚನೆಗಳನ್ನು ಕಾರ್ಯಕರ್ತರಿಗೆ ನೀಡಿದರು.
ಬಂಟ್ವಾಳ ಕ್ಷೇತ್ರ ಬಿಜೆಪಿ ಉಪಾಧ್ಯಕ್ಷರು, ಸಜಿಪಮುನ್ನೂರು ಮಹಾಶಕ್ತಿಕೇಂದ್ರದ ಅಧ್ಯಕ್ಷರಾದ ವಜ್ರನಾಥ ಕಲ್ಲಡ್ಕ ಪ್ರಸ್ತಾವಿಸಿ, ಸ್ವಾಗತಿಸಿದರು. ಮಹಾಶಕ್ತಿಕೇಂದ್ರದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಬೆಳ್ಳೂರು ವಂದಿಸಿದರು.ಸಭೆಯಲ್ಲಿ ಬಂಟ್ವಾಳ ಕ್ಷೇತ್ರ ಪಂಚಾಯತ್ ಚುನಾವಣೆಯ ಸಹಪ್ರಭಾರಿ ಪ್ರಭಾಕರ ಪ್ರಭು, ಕ್ಷೇತ್ರ ಸಮಿತಿ ಪದಾಧಿಕಾರಿಗಳು, ಪಕ್ಷದ ಪ್ರಮುಖರು, ವಿವಿದ ಸ್ತರದ ಜನಪ್ರತಿನಿಧಿಗಳು, ಸಹಕಾರಿ ಸಂಘಗಳ ಪ್ರಮುಖರು, ಬೂತ್ ಸಮಿತಿ ಅಧ್ಯಕ್ಷ ಪ್ರಧಾನ ಕಾರ್ಯದರ್ಶಿಗಳು, ವಿವಿದ ಮೋರ್ಚಗಳ ಪ್ರಮುಖರು ಉಪಸ್ಥಿತರಿದ್ದರು.
