ಬಂಟ್ವಾಳ: ಉತ್ತರ ಪ್ರದೇಶದಲ್ಲಿ ದಲಿತ ಯುವತಿಯ ಅತ್ಯಾಚಾರಗೈದು ಕೊಲೆ ಮಾಡಿರುವ ಕೃತ್ಯವನ್ನು ಖಂಡಿಸಿ ಬಂಟ್ವಾಳ ಮತ್ತು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಶುಕ್ರವಾರ ರಾತ್ರಿ ಬಿ.ಸಿ.ರೋಡೊನಲ್ಲಿ ಮೊಂಬತ್ತಿ ಜಾಥದ ಮೂಲಕ ಪ್ರತಿಭಟನೆ ನಡೆಯಿತು. ಮಾಜಿ ಸಚಿವ ರಮಾನಾಥ ರೈ,ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ,ವಿ.ಪ.ಸದಸ್ಯ ಹರೀಶ್ ಕುಮಾರ್ ಅವರ ನೇತೃತ್ವದಲ್ಲಿ ಬಿ.ಸಿ.ರೋಡಿನ ಕೈಕಂಬ ಪೊಳಲಿದ್ವಾರದ ಬಳಿಯಿಂದ ಹೊರಟ ಮೊಂಬತ್ತಿ ಜಾಥ ರಾಷ್ರೀಯ ಹೆದ್ದಾರಿಯಲ್ಲಿ ಸಾಗಿಬಂದು  ಮೇಲ್ಸ್ ತುವೆಯ ಕಳಭಾಗದಲ್ಲಿ ಸಂಪನ್ನಗೊಂಡಿತು.IMG-20201002-WA0106

ಬಳಿಕ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಮಾಜಿ ಸಚಿವ ರಮಾನಾಥ ರೈ ಈ ಕೃತ್ಯವನ್ನು ಖಂಡಿಸಿದರಲ್ಲದೆ ಉ.ಪ್ರ.ಮುಖ್ಯಮಂತ್ರಿ ಯೋಗಿ ಅದಿತ್ಯನಾಥ್ ಸರಕಾರ ಹೆಣ್ಮಕ್ಕಳ ಅದರಲ್ಲು ದಲಿತ ಸಮುದಾಯದ ಹೆಣ್ಮಕ್ಕಳನ್ನು ರಕ್ಷಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದು,ತಕ್ಷಣ  ಸರಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆಯನ್ನು ಜಾರಿಗೊಳಿಸುವಂತೆ  ಒತ್ತಾಯಿಸಿದರು.ಯುವತಿಯ ಕುಟುಂಬಕ್ಕೆ ಸಾಂತ್ವನ ಹೇಳಲು ಬಂದಿದ್ದ ಪಕ್ಷದ ನಾಯಕರಾದ ರಾಹುಲ್ ಗಾಂಧಿಯವರೊಂದಿಗೆ ನಡೆದುಕೊಂಡ ರೀತಿಯು ತಮಗೆ ನೋವು ತಂದಿದ್ದು,ಈ ಅಮಾನಷ ಕೃತ್ಯದಲ್ಲಿ ಭಾಗಿಯಾದ ಪಾತಕಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿದರು.  IMG-20201002-WA0104

ಜಿಪಂ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ,ಎಂ.ಎಸ್.ಮಹಮ್ಮದ್, ಮಂಜುಳಾ ಮಾವೆ, ತಾಪಂಉಪಾಧ್ಯಕ್ಷ ಅಬ್ಬಾಸ್ ಆಲಿ ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿಕುಂದರ್ ,ಸುದೀಪ್ ಕುಮಾರ್ ಶೆಟ್ಟಿ,ಪ್ರಮುಖರಾದ ಸದಾಶಿವ ಬಂಗೇರ,ವಾಸುಪೂಜಾರಿ ಲೊರೆಟ್ಟೋ,ಎಂ.ಚಂದ್ರಶೇಖರ ಪೂಜಾರಿ,ಪದ್ಮನಾಭ ರೈ, ಮಧುಸೂದನ್ ಶೆಣ್ಯೆ,ಲೋಲಾಕ್ಷ ಶೆಟ್ಟಿ,ಗಂಗಾಧರ ಪೂಜಾರಿ, ಜನಾರ್ದನ ಚಂಡ್ತಿಮಾರ್, ಮಹಮ್ಮದ್ ನಂದರಬೆಟ್ಟು, ಮಹಮ್ಮದ್ ನಂದಾವರ , ಮಲ್ಲಿಕಾ ಶೆಟ್ಟಿ,ಜಯಂತಿ ಪೂಜಾರಿ,ಐಡಾ ಸುರೇಶ್ ,ಮಲ್ಲಿಕಾ ಪಕಳ, ಗಾಯತ್ರಿ ರವೀಂದ್ರ ಸಪಲ್ಯ ಮೊದಲಾದವರಿದ್ದರು.

By suddi9

Leave a Reply

Your email address will not be published. Required fields are marked *