ಬಂಟ್ವಾಳ: ಪ್ರಸಕ್ತ ದಿನಗಳಲ್ಲಿ ನಡೆಯುವ ಕೆಟ್ಟವಿದ್ಯಮಾನಗಳನ್ನು ಸಮರ್ಥವಾಗಿ ಹತ್ತಿಕ್ಕುವ ಸಾಮರ್ಥ್ಯ ಪೊಲೀಸ್ ಇಲಾಖೆಗಿದ್ದು, ಅಪ್ರಾಪ್ತ ಹೆಣ್ಣುಮಕ್ಕಳು, ಮಹಿಳೆಯರು ಧೈರ್ಯಗೆಡದೆ ಪೊಲೀಸರಿಗೆ ಮಾಹಿತಿ ಕೊಟ್ಟಲ್ಲಿ ಇಂತಹ ಪುಂಡ ರನ್ನು ಕಾನೂನುರೀತಿಯಲ್ಲಿ ಶಿಕ್ಷಿಸಿ ಎಲ್ಲರೂ ನಿರ್ಭೀತಿಯಿಂದ ಓಡಾಡುವಂತಹ ಪರಿಸ್ಥಿತಿ ನಿರ್ಮಿಸುವಲ್ಲಿ ನಾಗರಿಕರ ಸಹಕಾರವು ಅಗತ್ಯವಿದೆ ಎಂದು ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯ ಠಾಣೆಯ ಎಸ್ .ಐ. ಪ್ರಸನ್ನ ಎಂ ಎಸ್ ರವರು ಹೇಳಿದ್ದಾರೆ. 
ಅರ್ಕುಳ ಶ್ರೀ ರಾಮ ವಿದ್ಯಾ ಸಂಸ್ಥೆಯಲ್ಲಿ ಶುಕ್ರವಾರ ಶ್ರೀ ರಾಮ ವಿದ್ಯಾ ಸಂಸ್ಥೆ , ರೋಟರಿ ಕ್ಲಬ್ ಫರಂಗಿಪೇಟೆ ವಲಯ ಮತ್ತು ಬಂಟ್ವಾಳ ಗ್ರಾಮಾಂತರ ಪೋಲೀಸು ಠಾಣೆಯ ಸಹ ಯೋಗದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಶುಕ್ರವಾರ ಆಯೋಜಿಸಿದ “ಹೆಣ್ಣು ಮಕ್ಕಳ ಸುರಕ್ಷತೆ ಮತ್ತು ಸಮಾಜದ ಕರ್ತವ್ಯ” ಎಂಬ ವಿಷಯದಲ್ಲಿ ಅವರು ಮಾತನಾಡಿದರು .
ರೋಟರಿ ಕ್ಲಬ್ ಫರಂಗಿಪೇಟೆ ವಲಯ ಅಧ್ಯಕ್ಷ ರಮೇಶ್ ತುಂಬೆ ಅವರು ಅದ್ಯಕ್ಷತೆ ವಹಿಸಿದ್ದರು. ಪ್ರೋಬೇಷನರಿ ಮಹಿಳಾ ಎಸ್. ಐ. ನಸ್ರಿನತಾಜ್ , ಶ್ರೀ ರಾಮ ವಿದ್ಯಾಸಂಸ್ಥೆ ಆಡಳಿತ ಮಂಡಳಿಯ ಕಾರ್ಯದರ್ಶಿ ಎ ಕೆ. ಜಯರಾಮ ಶೇಖ , , ರೋಟರಿ ಸದಸ್ಯ ಎ.ಕೆ.ಗಿರೀಶ್ ಶೆಟ್ಟಿ , ಬಂಟ್ವಾಳ ಎಪಿಎಂಸಿ ಉಪಾಧ್ಯಕ್ಷ ವಿಠ್ಠಲ್ ಸಾಲ್ಯಾನ್ , ಶಾಲಾ ನಿವೃತ್ತ ಮುಖ್ಯ ಶಿಕ್ಷಕ ದೇವದಾಸ್ ಕೆ ಆರ್ , ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ಶ್ರೀವಿದ್ಯಾ , ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಶೈಲಜಾ ಮತ್ತಿತರರು ಉಪಸ್ಥಿತರಿದ್ದರು. ಇದೇ ವೇಳ ರೋಟರಿ ಕ್ಲಬ್ ವತಿಯಿಂದ ಶ್ರೀ ರಾಮ ವಿದ್ಯಾ ಸಂಸ್ಥೆಗೆ ಸ್ಯಾನಿಟೈಸರ್ ಡಿಸ್ಪೋಸರ್ ಉಪಕರಣ ವನ್ನು ವಿತರಿಸಲಾಯಿತು. ರೋಟರಿ ಸದಸ್ಯ ದಿನೇಶ್ ಶೆಟ್ಟಿ ಕೊಟ್ಟಿಂಜ ಸ್ವಾಗತಿಸಿ,ಕಾರ್ಯಕ್ರಮ ನಿರೂಪಿಸಿದರು.ಕಾರ್ಯದರ್ಶಿ ಅರ್ಜುನ್ ಪೂಂಜಾ ವಂದಿಸಿದರು.
