ಬಂಟ್ವಾಳ: ತಾಲೂಕಿನ  ನರಿಕೊಂಬು ಗ್ರಾಮ ಪಂಚಾಯತ್ ವ್ಯಾಪ್ತಿಯ ಪುತ್ರೊಟ್ಟಿಬೈಲುವಿನಲ್ಲಿ ಸಂಪೂರ್ಣ ಕುಸಿದು ಬಿದ್ದು ಹಾನಿಗೀಡಾದ ಮನೆಗೆ ಮಾಜಿ ಸಚಿವ ರಮಾನಾಥ ರೈ ಅವರು ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು. IMG-20201002-WA0090

ಪುತ್ರೊಟ್ಟಿಬೈಲುವಿನ  ಶಾರದಾ ದರ್ಮಸ್ವಾಮಿ ಮತ್ತು ಪುಷ್ಪರಾಜ್  ಅವರ ಮನೆ ಕುಸಿದು ಬಿದ್ದು ಸಂಪೂರ್ಣ ಹಾನಿಗೀಡಾಗಿತ್ತು. ಕುಸಿದು ಬಿದ್ದ ಮನೆಯನ್ನು ಪರಿಶೀಲಿಸಿದ ಮಾಜಿ  ಸಚಿವರಾದ ಬಿ ರಮಾನಾಥ ರೈಯವರು ಇಲಾಖಾ ಅಧಿಕಾರಿಗಳಿಗೆ ಕರೆ ಮಾಡಿ  ಸೂಕ್ತ ಪರಿಹಾರ ಒದಗಿಸಲು ಸೂಚಿಸಿದರು.ಹಾಗೆಯೇ ತಹಸೀಲ್ದಾರ್ ಮತ್ತು ಕಂದಾಯ ನಿರೀಕ್ಷರೊಂದಿಗೆ ಮಾತುಕತೆ ನಡೆಸಿ ಶೀಘ್ರವಾಗಿ ಪರಿಶೀಲಿಸಲು ಸೂಚಿಸಿ ಕುಟುಂಬಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದರು.IMG-20201002-WA0087

ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಉಪಾಧ್ಯಕ್ಷ ಅಬ್ಬಾಸ್ ಅಲಿ,ತಾಪಂ ಸದಸ್ಯೆ ಗಾಯತ್ರಿ ರವೀಂದ್ರ ಸಪಲ್ಯ, ಬ್ಲಾಕ್ ಕಾಂಗ್ರೆಸ್  ಅಧ್ಯಕ್ಷರಾದ ಸುದೀಪ್ ಕುಮಾರ್ ಶೆಟ್ಟಿ ಹಾಗೂ ಬೇಬಿ ಕುಂದರ್,ನರಿಕೊಂಬು ವಲಯ ಅಧ್ಯಕ್ಷ ಮಾಧವ ಪೂಜಾರಿ ಕರ್ಬೆಟ್ಟು,ಮಾಜಿ ವಲಯ ಅಧ್ಯಕ್ಷ ಲಕ್ಷ್ಮಣ ಸಪಲ್ಯ,ರಮೇಶ್ ಪೂಜಾರಿ ಬೋರುಗುಡ್ಡೆ,ಅಲ್ಪಸಂಖ್ಯಾತ ಘಟಕದ ಅಧ್ಯಕ್ಷಅಲ್ಬರ್ಟ್ ಮೆನೇಜಸ್,ನರಿಕೊಂಬು ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್ ಕರ್ಬೆಟ್ಟು,ಲೋಕೇಶ್ ಪಿ ಜೆ,ಮಾಜಿ ಗ್ರಾಮ ಪಂಚಾಯತ್ ಸದಸ್ಯರುಗಳಾದ ವಿಶ್ವನಾಥ ಪೂಜಾರಿ,ರವೀಂದ್ರ ಸಪಲ್ಯ,ಶ್ರೀಮತಿ ಚಂದ್ರಾವತಿ ನಾಯ್ಕ, ಲಿಂಗಪ್ಪ ಕೊಟ್ಟಾರಿ, ಕೃಷ್ಣಪ್ಪ ಪೂಜಾರಿ, ಶೇಖರ ಪೂಜಾರಿ ಅಂತರ,ಶ್ರೀಮತಿ ಹೇಮಾ ಕುರ್ಚಿಪಲ್ಲ, ಪ್ರಮುಖರಾದ ಅರುಣ್ ಶೆಟ್ಟಿ,ಹರೀಶ್ ಕೆ, ಸುಂದರ ಮಡಿವಾಳ ಮೊದಲಾದವರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *