ಕೈಕಂಬ: ಇರುವೈಲ್ ಗ್ರಾಮದ ಅರೆಕೋಡಿ ಪದ್ಮನಾಭ ಪೂಜಾರಿ(42) ಮುಂಬೈಯಲ್ಲಿ ಸೆ.23ರಂದು ನಿಧನಹೊಂದಿದರು. ಮೃತರು ತಾಯಿ, ಪತ್ನಿ, ಪುತ್ರಿ ಮತ್ತು ಸಹೋದರ ಸಹೋದರಿ ಹಾಗೂ ಅಪಾರ ಬಂಧುವರ್ಗದವರನ್ನು ಅಗಲಿದ್ದಾರೆ.

ತನ್ನ ಚಿಕ್ಕ ವಯಸ್ಸಿನಲ್ಲಿಯೇ ಮುಂಬೈಯಲ್ಲಿ ಹೋಟೇಲ್‍ಉದ್ಯಮದ ನಡೆಸುತ್ತಿದ್ದ ಅವರು ಅಪಾರ ದೈವದೇವರ ಭಕ್ತರಾಗಿದ್ದು ಯಾವುದೇ ದೈವಸ್ಥಾನ, ದೇವಸ್ಥಾನದ ಜೀರ್ಣೋದ್ಧಾರ ಕೆಲಸ ಕಾರ್ಯಕ್ಕೆ ಕೊಡುಗೈದಾನಿಯಾಗಿದ್ದರು. ಅವರ ಅಗಲುವಿಕೆ ತುಂಬಲಾರದ ನಷ್ಟ.
*ಸಂತಾಪ ಸೂಚನೆ
ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸೇವಾ ಸಮಿತಿಹಾಗೂ ಹೊಸಮರಾಯ ಕೊಡಮಣಿತ್ತಾಯ ಮಹಮ್ಮಾಯಿ ನೇಮೋತ್ಸವಸಮಿತಿ ಪೂಪಾಡಿಕಲ್ಲು ಇವರು ಮೃತರ ಅತ್ಮಕ್ಕೆ ಚಿರಶಾಂತಿ ಭಗವಂತ ಅನುಗ್ರಹಿಸಲಿ ಎಂದು ಸಂತಾಪ ಸೂಚಿಸಿದ್ದಾರೆ.
