ಪೊಳಲಿ: ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಶ್ರಿಮದ್ ಎಡನೀರು ಮಠದ ನಿಯೋಜಿತ ಸ್ವಾಮೀಜಿ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿಜಿ ( ಜಯರಾಮ ಮಂಜಿತ್ತಾಯ) ಅವರು ಪೀಠರೋಃನದ ಪೂರ್ವಭಾವಿಯಾಗಿ ಕ್ಷೇತ್ರ ಸಂದರ್ಶನದಲ್ಲಿದ್ದು. ಸೆ.29ರಂದು ಮಂಗಳವಾರ ಶ್ರೀಕ್ಷೇತ್ರ ಪೊಳಲಿಗೆ ಭೇಟಿ ನೀಡಿ ದೆವರ ದರ್ಶನ ಪಡೆದರು. ಪೂಜ್ಯ ಶ್ರೀಗಳೊಂದಿಗೆ ಶ್ರೀ ಕುಂಟಾರ್ ರವೀಶ ತಂತ್ರಿಯವರು ಹಾಗೂ ಮಠದ ಪ್ರಮುಖರು ಇದ್ದರು.29vp sachidananda

ದೇವಳದ ತಂತ್ರಿಗಳಾದ ಸುಬ್ರಹ್ಮಣ್ಯ ತಂತ್ರಿ, ವೆಂಕಟೇಶ್ ತಂತ್ರಿ,ದೇವಳದ ಮೊಕ್ತೇಸರ ಹಾಗೂ ಅರ್ಚಕ ಮಾಧವ ಭಟ್,ಮಕ್ತೇಸರರಾದ ಯು.ತಾರನಾಥ ಆಳ್ವ, ಚೇರಾ ಸೂರ್ಯನಾರಾಯಣ ರಾವ್, ಕಾರ್ಯನಿರ್ವಹಣಾಧಿಕಾರಿ ಪಿ. ಜಯಮ್ಮ ಅರ್ಚಕರಾದ ನಾರಾಯಣ ಭಟ್, ಕೆ.ರಾಮ್ ಭಟ್, ಮಾಧವ ಮಯ್ಯ , ವಿಷ್ಣುಮೂರ್ತಿನಟ್ಟೋಜ, ಧಾರ್ಮಿಕ ಪರಿಷತ್ ಸದಸ್ಯ ಗಿರಿಪ್ರಕಾಶ್‍ತಂತ್ರಿಯವರು ಪೂಜ್ಯ ಶ್ರೀಗಳನ್ನು ಸ್ವಾಗತಿಸಿದರು.0003

ಪೂಜ್ಯ ಶ್ರೀಗಳು ತೀರ್ಥ ಕ್ಷೇತ್ರಗಳ ಸಂದರ್ಶನ ಮುಗಿಸಿ ಅ. 26ಕ್ಕೆ ಕಾಂಚಿಕಾಮಕೋಟೆ ಪೀಠದ ಪೂಜ್ಯ ಶ್ರೀಗಳು ಸನ್ಯಾಸ ದೀಕ್ಷೆ ನೀಡಿ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದರೆಂದು ನಾಮಾಂಕಿಂತಗೊಳಿಸಿ ಆಶೀರ್ವಾದಿಸಲಿರುವರು.ಅ. 28ಕ್ಕೆ ಶ್ರೀ ಎಡನೀರುಮಠದಲ್ಲಿ ನೂತನ ಶ್ರೀಗಳ ಪೀಠಾರೋಹನ ಸಮಾರಂಭ ಜರಗಲಿರುವುದು ಎಂದು ತಿಳಿಸಿದರು.0002

ಈ ಸಂದರ್ಭದಲ್ಲಿ ಕೃಷ್ಣ ರಾಜ್‍ಮಾರ್ಲ, ಕ್ರಷ್ಣಕುಮಾರ್ ಪೂಂಜ, ವೆಂಕಟೇಶ್‍ನಾವಡ, ಸುಬ್ರಾಯ ಕಾರಂತ, ಸಂಪತ್ ಕುಮಾರ್ ಶೆಟ್ಟಿ, ವಿದ್ಯಾಚರಣ್ ಭಂಡಾರಿ, ದೀಕ್ಷಿತ್‍ರೈ, ಜನಾರ್ಧನ ಅಮುಂಜೆ, ಮೋಹನ್ ಅಮುಂಜೆ ಮತ್ತಿತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *