ಬಂಟ್ವಾಳ: ಗ್ರಾಮಸ್ಥರ ಬಹು ಕಾಲದ ಬೇಡಿಕೆಯಂತೆ  ನಾದುರಸ್ತಿಯಲ್ಲಿದ್ದ ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೊಡ್ಮಾಣ್ -ಮೇರಮಜಲು ಸಂಪರ್ಕ ರಸ್ತೆ ಗೆ ಜಿಪಂ ಸದಸ್ಯ ರವೀಂದ್ರ ಕಂಬಳಿ ಅವರ ಮನವಿಯಂತೆ ದ.ಕ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿಯವರ 15 ಲಕ್ಷ ಅನುದಾನದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆಯನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪುತ್ತೂರು ಜಿಲ್ಲಾ ಸಂಘಚಾಲಕ್  ಕಾಂತಪ್ಪ ಶೆಟ್ಟಿ ಕೊಡ್ಮಣ್ ರವರು ನೆರವೇರಿಸಿದರು.IMG-20200930-WA0092
ಇದೇ ವೇಳೆ ಜಿಪಂ ಸದಸ್ಯ ರವೀಂದ್ರ ಕಂಬಳಿಯವರ 3 ಲಕ್ಷ ಅನುದಾನ ಮತ್ತು ಮೇರಮಜಲು ಪಂಚಾಯತ್ ನ 2.60 ಲಕ್ಷ ಅನುದಾನ ದಿಂದ ನಿರ್ಮಾಣ ವಾದ ಕೊಡ್ಮಾಣ್ – ಪೊನ್ನೋಡಿ ರಸ್ತೆಯನ್ನು ಉದ್ಘಾಟಿಸಲಾಯಿತು .  ಮೇರಮಜಲು ಪಂಚಾಯತ್ ಅನುದಾನ ದಿಂದ ನಿರ್ಮಿಸಲಾದ ಬಸ್ಸು ತಂಗುದಾಣ ವನ್ನು ಉದ್ಘಾಟಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಮಂಗಳೂರು ಮಂಡಲ ಅಧ್ಯಕ್ಷರಾದ ಚಂದ್ರಹಾಸ್ ಪಂಡಿತ್ ಹೌಸ್ ರವರು ಮಂಗಳೂರು ಕ್ಷೇತ್ರದ ಶಾಸಕರ ನಿರ್ಲಕ್ಷ್ಯದಿಂದ ಹಲವಾರು ಗ್ರಾಮೀಣ ಪ್ರದೇಶಗಳು ಈಗಲೂ ರಸ್ತೆ ಸಂಪರ್ಕ ವಂಚಿತ ವಾಗಿವೆ , ಅಭಿವೃದ್ಧಿ ಕಾಣದ ಗ್ರಾಮಗಳ ಬಗ್ಗೆ ಗಮನ ಹರಿಸಿ ಶ್ರಮಿಸಬೇಕಾಗಿದೆ ಎಂದರು.IMG-20200930-WA0090
ಜಿಲ್ಲಾ ಬಿಜೆ ಪಿ ಉಪಾಧ್ಯಕ್ಷರಾದ ಸಂತೋಷ್ ರೈ ಬೋಳಿಯಾರ್ , ಜಿಲ್ಲಾ ಬಿಜೆಪಿ ಕಾರ್ಯದರ್ಶಿಗಳಾದ ಸತೀಶ್ ಕುಂಪಲ , ಜಯಶ್ರೀ ಕರ್ಕೇರ , ಜಿಲ್ಲಾ ಪಂಚಾಯತ್ ಸದಸ್ಯ ರವೀಂದ್ರ ಕಂಬಳಿ,  ತಾಲೂಕು ಪಂಚಾಯತ್ ಸದಸ್ಯ ಗಣೇಶ್ ಸುವರ್ಣ , ಬಂಟ್ವಾಳ ಎಪಿಎಂಸಿ ಉಪಾಧ್ಯಕ್ಷರಾದ ವಿಠ್ಠಲ್ ಸಾಲ್ಯಾನ್ ,ಬಿಜೆಪಿ  ಮಂಗಳೂರು ಮಂಡಲ  ಕಾರ್ಯದರ್ಶಿ ಹೇಮಂತ್ ಶೆಟ್ಟಿ , ಮಾಧ್ಯಮ ಪ್ರಮುಖ್  ಪುರುಷೋತ್ತಮ ಕಲ್ಲಾಪು , ವಕೀಲರಾದ ಅಸ್ಗರ್ ಮುಡಿಪು , ಪುದು ಗ್ರಾಮ ಪಂಚಾಯತ್ ಸದಸ್ಯ ಮನೋಜ್ ಆಚಾರ್ಯ , ಫರಂಗಿಪೇಟೆ ವ್ಯ. ಸೇ. ಸ. ಬ್ಯಾಂಕ್ ನ ಅಧ್ಯಕ್ಷ ಸುಬ್ರಮಣ್ಯ ರಾವ್ ,ಬಂಟ್ವಾಳ ತಾಲೂಕುಪಂಚಾಯತ್ ಮಾಜಿ ಅಧ್ಯಕ್ಷೆ ಶೈಲಜಾ ಪಿ ಶೆಟ್ಟಿ ಕೊಟ್ಟಿಂಜ,  ಮೇರಮಜಲು ಗ್ರಾಮ ಪಂಚಾಯತ್ ನ ನಿಕಟ ಪೂರ್ವ ಅಧ್ಯಕ್ಷ ಸತೀಶ್ ನಾಯ್ಜ್ , ನಿಕಟ ಪೂರ್ವ ಸದಸ್ಯರುಗಳಾದ ಪದ್ಮನಾಭ ಶೆಟ್ಟಿ ಕೊಟ್ಟಿಂಜ  ,  ರವೀಂದ್ರ ಕೋಟ್ಯಾನ್ , ನಳಿನಾಕ್ಷಿ ,ಗಿರಿಜಾ , ಚಂದ್ರಾವತಿ ಕಲ್ಲಜಾಲ್,  ದಯಾನಂದ ಕಾಪಿಕಾಡ್ ಅಬ್ಬೆಟ್ಟು  ಬಿಜೆಪಿ ಬೂತ್ ಅಧ್ಯಕ್ಷ , ಜಯರಾಮ್ ಶೆಟ್ಟಿ ಅಬ್ಬೆಟ್ಟು , ಕೊಡ್ಮಣ್ ಬೂತ್ ಅಧ್ಯಕ್ಷ ಸುದಾಮ ರೈ , ಕೊಟ್ಟಿಂಜ ಬೂತ್ ಅಧ್ಯಕ್ಷ ಸಂತೋಷ್ ಶೆಟ್ಟಿ ಕೊಟ್ಟಿಂಜ ,ಕಾರ್ಯದರ್ಶಿ ಅರುಣ್ ಕುಮಾರ್ ಶೆಟ್ಟಿ , ಗ್ರಾಮಸ್ಥರಾದ ಮುರಾರಿ ಕಾಂಜಿಲಕೋಡಿ,  ಹರೀಶ್ ಕಾಂಜಿಲಕೋಡಿ, ಮಹಾಬಲ ಶೆಟ್ಟಿ , ಆನಂದ ಆಳ್ವ ಪೊನ್ನೋಡಿ , ಯಾದವ ಶೆಟ್ಟಿಗಾರ್ , ರವೀಂದ್ರ ನಾಯ್ಕ ಪೊನ್ನೋಡಿ , ಗುತ್ತಿಗೆದಾರರಾದ ಮೋಹನದಾಸ್  ಶೆಟ್ಟಿ  ಪೆತ್ತಮೊಗರು , ಮತ್ತಿತರರು ಉಪಸ್ಥಿತರಿದ್ದರು

By Suddi9

Leave a Reply

Your email address will not be published. Required fields are marked *