ಬಂಟ್ವಾಳ: ಕರ್ನಾಟಕ ರಾಜ್ಯ ಕುಲಾಲ- ಕುಂಬಾರರ ಯುವ ವೇದಿಕೆ ಇದರ ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಸಮಿತಿಯ ಮಹಾಸಭೆ ಅಧ್ಯಕ್ಷ ಸುಕುಮಾರ್ ಬಂಟ್ವಾಳ್ ಅಧ್ಯಕ್ಷತೆಯಲ್ಲಿ ಭಾನುವಾರ  ಬಿ.ಸಿ. ರೋಡಿನ ಪೊಸಳ್ಳಿಯ ಕುಲಾಲ ಸಮುದಾಯ ಭವನದಲ್ಲಿ ನಡೆಯಿತು.ಕಾರ್ಯದರ್ಶಿ ಹರಿಪ್ರಸಾದ್ ವರದಿ ವಾಚಿಸಿದರು. ಕೋಶಾಧಿಕಾರಿ ಮಾಧವ ಕುಲಾಲ್ ಲೆಕ್ಕ ಪತ್ರ ಮಂಡಿಸಿದರು. ಅಧ್ಯಕ್ಷ  ಸುಕುಮಾರ್ ಬಂಟ್ವಾಳ ಮಾತನಾಡಿ ಕಳೆದ ಅವಧಿಯಲ್ಲಿ ಸದಸ್ಯರ ಸಹಕಾರದಿಂದಾಗಿ ಹಲವಾರು ಸಮಾಜಮುಖಿ ಕಾರ್ಯಗಳನ್ನು ನಡೆಸಲು ಸಾಧ್ಯವಾಗಿದೆ. ಮುಂದಿನ ಅಧ್ಯಕ್ಷರಿಗೂ ಇದೇ ರೀತಿಯ ಸಹಕಾರ ನೀಡುವಂತೆ ಮನವಿ ಮಾಡಿಕೊಂಡರು. IMG-20200928-WA0002
ಈ ಸಂದರ್ಭ ನೂತನ ಸದಸ್ಯರನ್ನು ಸಮಿತಿಗೆ ಸೇರಿಸಿಕೊಳ್ಳಲಾಯಿತು. ಜಿಲ್ಲಾ ಸಮಿತಿ ಅಧ್ಯಕ್ಷ ಸುಧಾಕರ್  ಕುಲಾಲ್, ನೂತನ  ಅಧ್ಯಕ್ಷ ಹಾಗೂ ಪದಾಧಿಕಾರಿಗಳನ್ನು ಆಯ್ಕೆಗೊಳಿಸಿದರು.ಗೌರವಾಧ್ಯಕ್ಷ ನಾರಾಯಣ ಸಿ. ಪೆರ್ನೆ, ಜಿಲ್ಲಾ ವಲಯ ಸಂಚಾಲಕ  ಸತೀಶ್ ಜಕ್ರಿಬೆಟ್ಟು ಉಪಸ್ಥಿತರಿದ್ದರು.
ನೂತನ ಪದಾಧಿಕಾರಿಗಳ ಆಯ್ಕೆ: 
ಕರ್ನಾಟಕ ರಾಜ್ಯ ಕುಲಾಲ- ಕುಂಬಾರರ ಯುವ ವೇದಿಕೆ ಇದರ ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಸಮಿತಿಯ ನೂತನ ಅಧ್ಯಕ್ಷರಾಗಿ ಸತೀಶ್ ಜಕ್ರಿಬೆಟ್ಟು ಆಯ್ಕೆಯಾಗಿದ್ದಾರೆ.
ಗೌರವಾಧ್ಯಕ್ಷರಾಗಿ ಸುಕುಮಾರ್ ಬಂಟ್ವಾಳ, ಉಪಾಧ್ಯಕ್ಷರಾಗಿ ಹರಿಪ್ರಸಾದ್, ಸಂತೋಷ್ ಮರ್ತಾಜೆ, ಕಾರ್ಯದರ್ಶಿಯಾಗಿ ಪುರುಷೋತ್ತಮ ಮೈರನ್ ಪಾದೆ, ಜೊತೆ ಕಾರ್ಯದರ್ಶಿಯಾಗಿ ವಿತೇಶ್ ಕಾಮಾಜೆ, ಸಂಘಟನಾ ಕಾರ್ಯದರ್ಶಿಯಾಗಿ ಮಹೇಶ್ ಚಂದ್ರಿಗೆ, ಕೋಶಾಧಿಕಾರಿಯಾಗಿ ಕವಿರಾಜ್ ಚಂದ್ರಿಗೆ, ಕ್ರೀಡಾ ಕಾರ್ಯದರ್ಶಿಯಾಗಿ ಅಶೋಕ್ ಕೆ., ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಯಾದವ ಕುಲಾಲ್ ಅಗ್ರಬೈಲು, ಮಾಧ್ಯಮ ಪ್ರತಿನಿಧಿಯಾಗಿ ಸಂದೀಪ್ ಸಾಲ್ಯಾನ್, ಕಾನೂನು ಸಲಹೆಗಾರರಾಗಿ ಉಮಾಶಂಕರ್, ಜಿಲ್ಲಾ ವಲಯ ಸಂಚಾಲಕರಾಗಿ ಕಾರ್ತಿಕ್ ಹೊಳ್ಳರ ಬೈಲು, ಹಾಗೂ 15 ಮಂದಿ ಗೌರವ ಸಲಹೆಗಾರರನ್ನು ಆಯ್ಕೆಗೊಳಿಸಲಾಯಿತು.

By suddi9

Leave a Reply

Your email address will not be published. Required fields are marked *