ಬಂಟ್ವಾಳ: ಆರೋಗ್ಯ ಇಲಾಖೆಯ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರು ತಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಸೆ.24 ರಿಂದ ಮುಷ್ಕರ ಆರಂಭಿಸಿದ್ದು,ಸರಕಾರ ಇನ್ನೂ ಕೂಡ ಬೇಡಿಕೆಯ ಕುರಿತಾಗಿ ಗಮನಹರಿಸಿಲ್ಲ ಹೀಗಾಗಿ ಈ ವಿಚಾರವನ್ನು ಸರಕಾರದ ಗಮನಕ್ಕೆ ತಂದು ತಮ್ಮ ಬೇಡಿಕೆ ಈಡೇರಿಸಲು ಪ್ರಯತ್ನಿಸುವಂತೆ ಬಂಟ್ವಾಳ ತಾಲೂಕು ಆರೋಗ್ಯ ಇಲಾಖೆಯ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಯವರನ್ನು ಮಂಗಳವಾರ ಅವರ ಕಚೇರಿಯಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿದರು.
ಮುಷ್ಕರದಿಂದಾಗಿ ಕೋವಿಡ್ ತಪಾಸಣೆ,ಕೋವಿಡ್ ವರದಿಗೆ ವಿಳಂಬವಾಗುತ್ತಿದೆ.ಆದೇರೀತಿ ಲಸಿಕಾ,ತಾಯಿ ಮತ್ತಮಕ್ಕಳ ಆರೋಗ್ಯ,ಕ್ಷಯರೋಗ ನಿಯಂತ್ರಣ,ಅಂಧತ್ವ ಮೊದಲಾದ ಕಾರ್ಯಕ್ರಗಳಿಗೆ ತೊಂದರೆಯಾಗುತ್ತಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.ಈ ಸಂದರ್ಭದಲ್ಲಿ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ಡಾ.ಪ್ರಕಾಶ್ ಕುಮಾರ್ ,ಕಾರ್ಯದರ್ಶಿ ವಿಶ್ವನಾಥ್ ಮೊದಲಾದವರಿದ್ದರು.
