ಕೋಲಾರ: ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಟ್ಟಡದ ನವೀಕರಣ ಕಾಮಗಾರಿಯನ್ನು ಸುಮಾರು 26 ಲಕ್ಷ ವೆಚ್ಚದಲ್ಲಿ ನಡೆಸಲು ತೀರ್ಮಾನಿಸಲಾಗಿತ್ತು.ಈ ಕಾಮಗಾರಿಯ ಸಂಪೂರ್ಣ ವೆಚ್ಚವನ್ನ ಮುಳಬಾಗಿಲು ಕ್ಷೇತ್ರದ ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಅವರು ಭರಿಸುವುದಾಗಿ ಒಪ್ಪಿಕೊಂಡಿದ್ದರು. ಅದರಂತೆ ಕಳೆದ ಆಗಸ್ಟ್ 14 ರಂದು ಮೊದಲನೇ ಕಂತಾಗಿ 10 ಲಕ್ಷ ರೂ ಹಾಗೂ ಸೆಪ್ಟೆಂಬರ್ 28 ರಂದು ಎರಡನೇ ಕಂತಾಗಿ 10 ಲಕ್ಷ ರೂ.ಗಳನ್ನು ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳಿಗೆ ಕೊತ್ತೂರು ಮಂಜುನಾಥ್ ಅಭಿಮಾನಿಗಳು ವಿತರಣೆ ಮಾಡಿದರು.pressclub news

ಈ ಹಣವನ್ನು ಗುತ್ತಿಗೆದಾರರಾದ ಚಂಚಿಮಲೆ ರಮೇಶ್ ರವರಿಗೆ ಒಟ್ಟು 20 ಲಕ್ಷ ರೂ.ಗಳನ್ನು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ವಿ.ಮುನಿರಾಜು ರವರ ಮುಖಾಂತರ ಮಳಬಾಗಿಲು ಕ್ಷೇತ್ರದ ಮಾಜಿ ಶಾಸಕರು ಹಾಗೂ ಸಮಾಜ ಸೇವಕರಾದ ಡಾ.ಕೊತ್ತೂರು ಜಿ ಮಂಜುನಾಥ್ ಅವರ ಪರವಾಗಿ ಎಂ.ಎಸ್.ಐ.ಎಲ್ ಮಾಜಿ ಅಧ್ಯಕ್ಷ ಎಂ.ಎಲ್ ಅನಿಲ್ ಕುಮಾರ್, ಬಂಗಾರಪೇಟೆ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಚಂದ್ರಾರೆಡ್ಡಿ, ಯುವ ಮುಖಂಡ ಕಾಮನೂರು ಬಾಬು ರವರು ನೀಡಿದರು. ಸದರಿ ಕಾಮಗಾರಿಯನ್ನು ಸುಸಜ್ಜಿತವಾಗಿ, ಅಚ್ಚುಕಟ್ಟಾಗಿ ನಿರ್ವಹಿಸಿ ಅತೀ ಶೀಘ್ರವಾಗಿ ಪೂರ್ಣಗೊಳಿಸುವಂತೆ ಕೋರಿದರು.

ಈ ಸಂದರ್ಭದಲ್ಲಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಬಿ.ವಿ ಗೋಪಿನಾಥ್, ಸಹಕಾರ ಸಂಘದ ಅಧ್ಯಕ್ಷರಾದ ಕೆ.ಎಸ್‍ಗಣೇಶ್, ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್, ಖಜಾಂಚಿ ಎ.ಜಿ ಸುರೇಶ್ ಕುಮಾರ್, ಕಾರ್ಯದರ್ಶಿ ಆರ್. ವೆಂಕಟೇಶ್, ಪತ್ರಕರ್ತರಾದ ಮಹಮದ್ ಚಾಂದ್‍ಪಾಷ, ಡಾ. ಕೊತ್ತೂರು ಜಿ.ಮಂಜುನಾಥ್ ಅಭಿಮಾನಿ ಬಳಗದ ಮುಖಂಡರಾದ, ಸೀಸಂದ್ರ ಗೋಪಾಲಗೌಡ, ವೈ.ಶಿವಕುಮಾರ್, ಬಿ.ಟಿ ಚಂದ್ರಶೇಖರ್, ಮೈಲಂಡಹಳ್ಳಿ ಮುರಳಿ, ನುಕ್ಕನಹಳ್ಳಿ ಶ್ರೀನಿವಾಸ್, ನವೀನ್, ಗುತ್ತಿಗೆದಾರ ಚಂದ್ರಕಾಂತ್ ಮತ್ತಿತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *