ಬಂಟ್ವಾಳ : ರೋಟರಿ ಕ್ಲಬ್ ಬಂಟ್ವಾಳ ಟೌನ್ ಇದರ ವತಿಯಿಂದ ವಿದ್ಯಾಗಮ ಕಾರ್ಯಕ್ರಮದ ಅಂಗವಾಗಿ ಕಲ್ಲಡ್ಕ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಲೇಖನ ಸಾಮಗ್ರಿ, ಬ್ಲಾಕ್ ಬೋರ್ಡ್, ವಿತರಿಸಲಾಯಿತು. ರೋಟರಿ ಕ್ಲಬ್ ಬಂಟ್ವಾಳ ಟೌನ್ ಅಧ್ಯಕ್ಷರಾದ ರೊ. ಪಿ. ಎಚ್. ಎಫ್. ಪದ್ಮನಾಭ ರೈ ನೇತೃತ್ವದಲ್ಲಿ ಲೇಖನ ಸಾಮಾಗ್ರಿ ಶಾಲಾಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಮುಖ್ಯಶಿಕ್ಷಕರಾದ ಅಶ್ರಫ್, ಹಿರಿಯ ಶಿಕ್ಷಕಿ ವಾರಿಜಾಕ್ಷಿ, ಕಸ್ತೂರಿ. ಜಿ , ರೂಪ ಸಿಸ್ಟರ್, ರೋಟೋರಿಯನ್ಸ್ ಗಳಾದ, ಕಾರ್ಯದರ್ಶಿ ಕಿಶೋರ್ ಯಸ್ ಕುಮಾರ್, ಸುಜಾತ ಪಿ ರೈ, ಸುಂದರ್ ಬಂಗೇರ, ಜ್ಯೋತಿಂದ್ರ ಶೆಟ್ಟಿ, ದಯಾನಂದ ಶೆಟ್ಟಿ, ಸೆಸ್ಸಪ್ಪ ಮೂಲ್ಯ, ಪಿ. ಎಚ್. ಎಫ್. ಸತೀಶ್ ಕುಮಾರ್, ಗಣೇಶ್ ಶೆಟ್ಟಿ, ನಾರಾಯಣ್ ಸಿ ಪೆರ್ನೆ, ಕೇಶವ ನಾಯ್ಕ್, ದಿವಾಕರ ಶೆಟ್ಟಿ, ಸುದೀರ್ ಶೆಟ್ಟಿ, ಭಾಗವಹಿಸಿದ್ದರು.
