ಬಂಟ್ವಾಳ: ರೋಟರಿ ಕ್ಲಬ್ ಬಂಟ್ವಾಳ ಟೌನ್ ಮತ್ತು ಕನ್ಯಾನ ಸರಕಾರಿ ಪ್ರಾಥಮಿಕ ಅರೋಗ್ಯ ಕೇಂದ್ರ ಇದರ ಸಂಯುಕ್ತಾಶ್ರಯದಲ್ಲಿ ಉಚಿತ ಕೋವಿಡ್ ರಾಪಿಡ್ ಪರೀಕ್ಷೆಯನ್ನು ವಿವಿದೆಡೆಯಲ್ಲಿ ಭಾನುವಾರ ನಡೆಸಲಾಯಿತು. ರೋಟರಿ ಕ್ಲಬ್ ಬಂಟ್ವಾಳ ಟೌನ್ ಅಧ್ಯಕ್ಷ ರೊ. ಪಿ. ಎಚ್. ಎಫ್. ಪದ್ಮನಾಭ ರೈ ನೇತೃತ್ವದಲ್ಲಿ ಸರಕಾರಿ ಪ್ರಾಥಮಿಕ ಅರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅಶ್ವಿನ್ ಸಾಗರ್ ಮುಂದಾಳತ್ವದಲ್ಲಿ ಸಂತ ಪೌಲ್ ಚರ್ಚ್ ದೇಲಂತಬೆಟ್ಟು , ಕನ್ಯಾನ ಮೊದಲಾದೆಡೆಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಮಂಜುಳಾ ಎ.ಎನ್ ಎಂ., ಸುರಕ್ಷಾ ಲ್ಯಾಬ್ ಟೆಕ್ನಿಷನ್, ಅಬ್ದುಲ್ ನಜಿರ್ ಡಿ.ಇ.ಒ. , ಚರ್ಚಿನ ಧರ್ಮಗುರುಗಳಾದ ಸುನಿಲ್ ಪ್ರವೀಣ್ ಪಿಂಟೋ, ರೋಟೋರಿಯನ್ ಗಳಾದ ಕಿಶೋರ್ ಯಸ್ ಕುಮಾರ್, ಪಿ. ಎಚ್. ಎಫ್. ಸತೀಶ್ ಕುಮಾರ್, ಚಿತ್ತರಂಜನ್ ಶೆಟ್ಟಿ , ಗಣೇಶ್ ಶೆಟ್ಟಿ, ಸುಂದರ್ ಬಂಗೇರ , ಸುದೀರ್ ಶೆಟ್ಟಿ, ಸುಜಾತ ಪಿ ರೈ ಮೊದಲಾದವರಿದ್ದರು.
