ಬಂಟ್ವಾಳ: ಕರಾವಳಿಯ ಜಿಲ್ಲೆಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಮರಳು ನೀತಿ ಜಾರಿ ಮಾಡುವುದರ ಮೂಲಕ  ಮುಂದಿನ ಅಕ್ಟೋಬರ್-ನವಂಬರ್ ತಿಂಗಳಲ್ಲಿ ಯೂನಿಟ್ ಒಂದಕ್ಕೆ  2 ಸಾ.ರೂ. ದರದಲ್ಲಿ ಲಭ್ಯವಿರುವ ಮರಳನ್ನು ಜನಸಾಮಾನ್ಯರ ಮನೆ ಬಾಗಿಲಿಗೆ ತಲುಪಿಸುವ ಪ್ರಯತ್ನ ಮಾಡಲಾಗುವುದು ಎಂದು  ಬಿ.ಜೆ.ಪಿ. ರಾಜ್ಯಾಧ್ಯಕ್ಷರು, ಸಂಸದ ನಳಿನ್ ಕುಮಾರ್ ಕಟೀಲ್ ರವರ ಹೇಳಿಕೆಯನ್ನು ಬಂಟ್ವಾಳ ತಾಲೂಕು ಪಂಚಾಯತ್ ಸದಸ್ಯ ಪ್ರಭಾಕರ ಪ್ರಭು ಸ್ವಾಗತಿಸಿ, ಸಮರ್ಥಿಸಿದ್ದಾರೆ.
IMG-20200727-WA0023
ಸಂಸದರ ಈ ಹೇಳಿಕೆ ಕುರಿತು  ಕಾಂಗ್ರೆಸ್ ನಾಯಕರು  ಕ್ಷುಲ್ಲಕ ಕಾರಣದ ನೆಪದಲ್ಲಿ ಟೀಕಿಸುವುದು ಸರಿ ಅಲ್ಲ, ಸಂಸದ ನಳಿನ್ ಕುಮಾರ್ ಕಟೀಲ್ ರವರು ಒಂದು ಲೋಡ್ ಮರಳಿಗೆ  2000 ರೂ.ಗೆ ಒದಗಿಸಲಾಗುವುದೆಂದು ಹೇಳಿಕೆ ನೀಡೊಲ್ಲ ಪ್ರತಿ ಯೂನಿಟ್ ಮರಳಿಗೆ  2 ಸಾ.ರೂ.ನಂತೆ ತಲುಪಿಸುವ ಪ್ರಯತ್ನ ಮಾಡಲಾಗುವುದು ಎಂಬುದಾಗಿ ಹೇಳಿರುವುದನ್ನು ಅಪಾರ್ಥಿಸಿ ಪ್ರತಿಕ್ರಿಯೆ ನೀಡುವುದನ್ನು ಜನ ಒಪ್ಪುವುದಿಲ್ಲ,ವಿಚಾರವನ್ನು ಆರ್ಥೈಸಿಕೊಂಡು ರಾಜಕೀಯ ಮಾಡುವುದು ಒಳಿತು ಎಂದು ಪ್ರಭು ಕಾಂಗ್ರೆಸ್ ನಾಯಕರಿಗೆ ಪ್ರಕಟಣೆಯ ಮೂಲಕ ತಿರುಗೇಟು ನೀಡಿದ್ದಾರೆ.
ಜಗತ್ ನಾಯಕ,ದೇಶದಪ್ರಧಾನಿ ನರೇಂದ್ರ ಮೋದಿಯವರು ಜಾರಿಗೆ ತಂದಿರುವ ಜನೋಪಯೋಗಿ ಯೋಜನೆಗಳನ್ನು ಸಹಿಸದಿರುವವರು ತನ್ನ ಮೈ ಯನ್ನು ತಾನೇ  ಪರಚಿದಂತಾಗಿದೆ ಕಾಂಗ್ರೆಸಿಗರ ಈಗಿನ ಪರಿಸ್ಥಿತಿ ಎಂದು ಪ್ರಭಾಕರ ಪ್ರಭು ತಮ್ಮ ಹೇಳಿಕೆಯಲ್ಲಿ ಟೀಕಿಸಿದ್ದಾರೆ.ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಎಲ್ಲೆಂದರಲ್ಲಿ ಮರಳು ಮಾಫಿಯಾ ನಡೆದಿರುವುಂದಲೇ ಈಗ ಮರಳು ದುಬಾರಿಯಾಗಲು ಕಾರಣ ವಾಗಿದ್ದು, ಇನ್ನಾದರೂ ರಾಜ್ಯ,ಜಿಲ್ಲೆಯ ಅಭಿವೃದ್ಧಿ ಯೋಜನೆಯ ಕುರಿತಾಗಿ  ಮಾತನಾಡೋಣ .ಎಂದು ಪ್ರಭಾಕರ ಪ್ರಭು ಪ್ರಕಟಣೆಯಲ್ಲಿ ಕೋರಿದ್ದಾರೆ.

By suddi9

Leave a Reply

Your email address will not be published. Required fields are marked *