ಬಂಟ್ವಾಳ :  ಸಂಸ್ಕೃತಿಯ ಅವನತಿಯ ಕಾಲದಲ್ಲಿ ಸುಸಂಸ್ಕೃತ ಜೀವನದ ಪ್ರೇರಣೆಗೆ ಯಕ್ಷಗಾನ ನಾಂದಿಯಾಗಿದೆ ಎಂದು ಹಿರಿಯ ಯಕ್ಷಗಾನ ಕಲಾವಿದ ದಿನೇಶ್ ಶೆಟ್ಟಿ ಕಾವಳಕಟ್ಟೆ ಹೇಳಿದ್ದಾರೆ.
2009pkt4
ಬಂಟ್ವಾಳ ತಾಲೂಕಿನ ಕಾವಳಪಡೂರು ಗ್ರಾಮದ ಮಧ್ವ ಯಕ್ಷಕೂಟದ ವತಿಯಿಂದ ಮಧ್ವದ ಮಧ್ವ ಪ್ಯಾಲೇಸ್ ಸಭಾಭವನದಲ್ಲಿ   ಭಾನುವಾರ ನಡೆದ  ಯಕ್ಷಗಾನ ತಾಳಮದ್ದಳೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ  .ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.IMG-20200920-WA0050
 ಖ್ಯಾತ  ಭಾಗವತೆ ಕಾವ್ಯಶ್ರೀ ನಾಯಕ್ ಅಜೇರು  ಕಾರ್ಯಕ್ರಮವನ್ನು  ಉದ್ಘಾಟಿಸಿ ಶುಭ ಹಾರೈಸಿದರು.ಕಾವಳಪಡೂರು ಪ್ರಾ.ಕೃ.ಸ.ಸಂಘದ ಅಧ್ಯಕ್ಷ ಪ್ರಮೋದ್ ಕುಮಾರ್ ರೈ ಅವರು ಮಾತನಾಡಿ, ಯಕ್ಷಗಾನ ಯುವ ಜನಾಂಗವನ್ನು ತನ್ನತ್ತ ಸೆಳೆಯುತ್ತಿರುವುದು ಯಕ್ಷ ರಂಗದ ಬೆಳವಣಿಗೆಗೆ ಪೂರಕವಾಗಿದೆ ಎಂದರು.IMG-20200920-WA0048
ಸಂಘಟಕ ಭಾಸ್ಕರ ಶೆಟ್ಟಿ ಮಧ್ವ  ಅವರು  ಮಾತನಾಡಿ, ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಶ್ರೀ ಪಾದ ಸ್ವಾಮೀಜಿ  ಅವರಿಂದ ಉದ್ಘಾಟನೆಗೊಂಡ ಈ ಯಕ್ಷಗಾನ ಸಂಘ ಬೆಳೆಯಲು ಯಕ್ಷಾಭಿಮಾನಿಗಳ ಸಹಕಾರ ಅಗತ್ಯ ಎಂದರು.  ಸ್ಥಳದಾನಿ ರುಕ್ಮಯ ಗೌಡ, ಯಕ್ಷ ಕೂಟದ ಪದಾಧಿಕಾರಿಗಳಾದ ಸಂಜೀವ ಶೆಟ್ಟಿ ಪಂಜಿಕಲ್ಲು, ರಾಜ್ ಪ್ರಸಾದ್ ಆರಿಗ, ಜಯಶಂಕರ ಉಪಾಧ್ಯಾಯ, ಪ್ರಮುಖರಾದ ಚಂದ್ರಹಾಸ ಶೆಟ್ಟಿ ಮಧ್ವ, ರಾಮಣ್ಣ ಶೆಟ್ಟಿ, ಗೋಪಾಲಕೃಷ್ಣ ಬಂಗೇರ, ಬೇಬಿಕುಂದರ್, ದಾಮೋದರ ರೈ, ಭವಾನಿ ಶ್ರೀಧರ್, ಆನಂದ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ಶಿಕ್ಷಕ ಉದಯ ಕುಮಾರ್ ಜೈನ್ ಕಾರ್ಯಕ್ರಮ ನಿರೂಪಿಸಿದರು. ವಗ್ಗ ಹಾ. ಉ.ಸಂಘದ ಅಧ್ಯಕ್ಷ ಶಿವಪ್ಪ ಗೌಡ ನಿನ್ನಿಕಲ್ಲು ವಂದಿಸಿದರು. ಬಳಿಕ ವಿಟ್ಠಲ ಶೆಟ್ಟಿ ಮೂಡಾಯೂರು ಅವರ ಪ್ರಾಯೋಜಕತ್ವದಲ್ಲಿ ಸುಭದ್ರಾ ಕಲ್ಯಾಣ ತಾಳಮದ್ದಳೆ ನಡೆಯಿತು.

By suddi9

Leave a Reply

Your email address will not be published. Required fields are marked *