ಬಂಟ್ವಾಳ: ಪುರಸಭಾ ವ್ಯಾಪ್ತಿಯ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ನಗರ ಆರೋಗ್ಯ ಕೇಂದ್ರದ ವತಿಯಿಂದ ಪುರಸಭಾ ಕಚೇರಿಯಲ್ಲಿ ನಡೆಯಿತು. ನಗರ ಆರೋಗ್ಯ ಕೇಂದ್ರದ ಎಆರ್ ಎಸ್ ಅಧ್ಯಕ್ಷ ,ಮಾಜಿ ಬೂಡಾ ಅಧ್ಯಕ್ಷ ಸದಾಶಿವ ಬಂಗೇರ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯಾಧಿಕಾರಿ ಲೀನಾ ಬ್ತಿಟ್ಟೋ ಶಿಬಿರದ ಉದ್ಘಾಟನೆಗೈದರು.ಪುರಸಭಾ ಇಂಜಿನಿಯರ್ ಡೊಮೆನಿಕ್ ಡಿಮೆಲ್ಲೊ,ಸಹಾಯಕ ಇಂಜಿನಿಯರ್ ಇಕ್ಬಾಲ್ ಮೊದಲಾದವರಿದ್ದರು.ತಜ್ಞ ವೈದ್ಯರಾದ ಡಾ.ಚೇತನ್ ಕುಮಾರ್,ಡಾ.ಸಂದೀಪ್ ಕುಡ್ವ,ಡಾ.ಅಶ್ವನಿ ಮೊದಲಾದವರು ಆರೋಗ್ಯ ತಪಾಸಣೆಗೈದರು. ಹಲವಾರು ಮಂದಿ ಇದರ ಸದುಪಯೋಗ ಪಡೆದರು.
